ಮಥುರಾ ಪೊಲೀಸ್ ಸಮವಸ್ತ್ರಗಳಲ್ಲಿ ಶ್ರೀಕೃಷ್ಣ? |News Mirchi

ಮಥುರಾ ಪೊಲೀಸ್ ಸಮವಸ್ತ್ರಗಳಲ್ಲಿ ಶ್ರೀಕೃಷ್ಣ?

ಶೀಘ್ರದಲ್ಲಿಯೇ ಉತ್ತರ ಪ್ರದೇಶದ ಮಥುರಾ ಪೊಲೀಸರ ಸಮವಸ್ತ್ರಗಳಲ್ಲಿ ಶ್ರೀಕೃಷ್ಣ ಕಾಣಿಸಿಕೊಳ್ಳಲಿದ್ದಾನೆ. ಹೌದು ಇದನ್ನು ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ, ಮಥುರಾ ಜಿಲ್ಲಾ ಎಸ್ಪಿ ಸ್ವಪ್ನಿಲ್ ಮಂಗೈನ್ ಅವರು ಈ ನಡೆಯನ್ನು ಖಚಿತಪಡಿಸಿದ್ದಾರೆ.

ಪುಣ್ಯಕ್ಷೇತ್ರವಾಗಿರುವ ಮಥುರಾದಲ್ಲಿ ಪೊಲೀಸರು ಪ್ರವಾಸಿ ಸ್ನೇಹಿ ಎಂದು ತೋರಿಸಲು ಅವರ ಸಮವಸ್ತ್ರದಲ್ಲಿನ ಲೋಗೋದಲ್ಲಿ ಶ್ರೀಕೃಷ್ಣನ ಚಿತ್ರವನ್ನು ಸೇರಿಸಲಾಗುತ್ತದೆ ಎಂದು ಮಂಗೈನ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಲೋಗೋ ವಿನ್ಯಾಸ ಮತ್ತೆ ಆಯ್ಕೆಯೂ ಅಂತಿಮವಾಗಿದೆ ಎನ್ನಲಾಗುತ್ತಿದೆ.

  • No items.

ಆದರೆ ಸರ್ಕಾರದ ಈ ನಡೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಪ್ರದೇಶ ಸರ್ಕಾರ ಕೇಸರೀಕರಣ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ಲೋಗೋಗಳಿಂದಾಗಿ ಪೊಲೀಸರು ಜ್ಯಾತ್ಯಾತೀತರೆಂಬ ಭಾವನೆ ಹೊರಟು ಹೋಗುತ್ತದೆ ಎಂದು ಮಾಜಿ ಡಿಜಿಪಿ ಬ್ರಿಜ್ ಲಾಲ್ ಅವರು ಹೇಳಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ವಿವೇಕ್ ಬನ್ಸಾಲ್, ಒಂದು ಧರ್ಮಕ್ಕೆ ಸೇರಿದ ದೇವರ ಚಿತ್ರವನ್ನು ಹೊಂದಿರುವ ಲೋಗೋ ತರುವುದು ಸಂವಿಧಾನದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!