ತೂಕ ಕಡಿಮೆ ಮಾಡಲು ಕುಡಿಯಿರಿ ಮನೆಯಲ್ಲಿಯೇ ತಯಾರಿಸುವ ಪೇಯಗಳು – News Mirchi
We are updating the website...

ತೂಕ ಕಡಿಮೆ ಮಾಡಲು ಕುಡಿಯಿರಿ ಮನೆಯಲ್ಲಿಯೇ ತಯಾರಿಸುವ ಪೇಯಗಳು

ದಿನೇ ದಿನೇ ನಿಮ್ಮ ತೂಕದಲ್ಲಿ ವೇಗವಾಗಿ ಏರಿಕೆಯಾಗುತ್ತಿದೆಯೇ? ಕಛೇರಿಯಲ್ಲಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತಿರುವಿರೇ? ಜಿಮ್ ಗೆ ಹೋಗಿ ಒಂದಷ್ಟು ತೂಕ ಕರಗಿಸಲೂ ಸಮಯ ಸಿಗುತ್ತಿಲ್ಲವೇ? ಹೌದಾದರೆ, ಮನೆಯಲ್ಲಿಯೇ ಆರೋಗ್ಯಕರ ಆಹಾರ ಸೇವನೆಯಿಂದ ಫಿಟ್ ಆಗಿರಲು ಸಾಧ್ಯ.

ಚಯಾಪಚಯದ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ನೀರಿನ ಅಂಶ ಪ್ರಮುಖವಾಗಿದೆ. ಮನೆಯಲ್ಲಿಯೇ ಕೆಲವೊಂದು ಪಾನೀಯಗಳನ್ನು ತಯಾರಿಸಿ ಸೇವಿಸುವ ಮೂಲಕ ಫಿಟ್ ಆಗಿರುವುದು ಹೇಗೆ ಎಂದು ನೋಡೋಣ.

ಎಳನೀರು
ದೇಹ ಫಿಟ್ ಆಗಿರಲು ಸುಲಭವಾದ ಮಾರ್ಗವೆಂದರೆ ಎಳನೀರು ಸೇವನೆ. ಪ್ರತಿ ದಿನ ಒಂದೆರಡು ಲೋಟ ಎಳನೀರು ಕುಡಿಯುವುದು ರೂಢಿಸಿಕೊಳ್ಳಿ. ನಿಮ್ಮ ದೇಹದಲ್ಲಿನ ಪೊಟ್ಯಾಷಿಯಂ ಮಟ್ಟ ಹೆಚ್ಚಾಗಿದ್ದರೆ ಇದರ ಸೇವನೆ ಬೇಡ.

ಶುಂಠಿ ಟೀ
ಒಂದು ಕಪ್ ನೀರನ್ನು ಜಜ್ಜಿದ ಶುಂಠಿಯೊಂದಿಗೆ ಕುದಿಸಿ. ಶುಂಠಿಯ ವಾಸನೆ ನಿಮ್ಮನ್ನು ಆಕರ್ಷಿಸುವವರೆಗೆ ಕುದಿಸಿ. ನಂತರ ಅದನ್ನು ಒಂದು ಕಪ್ ಗೆ ಸುರಿದು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಬಿಸಿಯಾಗಿರುವಾಗಲೇ ಸೇವಿಸಿ. ಬೇಕಿದ್ದರೆ 2 ಹನಿ ನಿಂಬೆ ರಸವನ್ನು ಇದಕ್ಕೆ ಬೆರೆಸಬಹುದು.

ಬ್ಲಾಕ್ ಕಾಫಿ:
ಕೆಲಸ ಆರಂಭಿಸುವ ಮುನ್ನ ಒಂದು ಕಪ್ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಒಳ್ಳೆಯದು. ಇದು ನಿಮಗೆ ರುಚಿಯಾಗಿಲ್ಲವೆನಿಸಿದರೂ ಸರಿ, ಬೇಗ ತೂಕ ಕಡಿಮೆ ಮಾಡಿಕೊಳ್ಳಲು ಇದೊಂದು ಉತ್ತಮ ಪೇಯ. ನೆನಪಿನಲ್ಲಿಡಿ ಸಕ್ಕರೆ ಬೆರೆಸದಿರಿ.

ನಿಂಬೆ ಮತ್ತು ಕಿತ್ತಳೆ ಡಿಟಾಕ್ಸ್ ನೀರು
ಒಂದು ಬಾಟಲಿನಲ್ಲಿ ನೀರು ತುಂಬಿ. ನಿಂಬೆ ಹಣ್ಣನ್ನು ಎರಡು ಹೋಳಾಗಿ ಕತ್ತರಿಸಿ. ಹಾಗೆಯೇ ಕಿತ್ತಳೆ ಹಣ್ಣಿನ ಸಿಪ್ಪೆಯನ್ನೂ ತೆಗೆಯಿರಿ. ಕಿತ್ತಳೆ ಹಣ್ಣನ್ನು ನೀವು ಎರಡು ಭಾಗವಾಗಿ ಕತ್ತರಿಸಲೂ ಬಹುದು. ಈ ಎರಡನ್ನೂ ನೀರು ತುಂಬಿದ ಬಾಟಲಿಗೆ ಹಾಕಿ ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಬೆಳಗ್ಗೆ ರೆಫ್ರಿಜರೇಟರ್ ನಲ್ಲಿ ತಂಪು ಮಾಡಿ ಕುಡಿಯಿರಿ. ಇದು ತೂಕ ಕಡಿಮೆಯಾಗಲು ನೆರವಾಗುವುದಲ್ಲದೆ, ಚಯಾಪಚಯ ಕ್ರಿಯೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ

ಹಣ್ಣಿನ ರಸ:
ಪ್ರತಿ ದಿನ ಹಣ್ಣಿನ ರಸವನ್ನು ಕುಡಿಯಿರಿ. ಆದರೆ ಅದು 3ಕ್ಕಿಂತ ಹೆಚ್ಚು ಲೋಟಗಳಷ್ಟು ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಿ.

 

Contact for any Electrical Works across Bengaluru

Loading...
error: Content is protected !!