ರಾತ್ರಿ ಬೆಳಗಾಗುವುದರೊಳಗೆ ಟೀ ಮಾರುವಾತ ಲಕ್ಷಾಧೀಶ

ತಿರುವನಂತಪುರಂ: ಟೀ ಅಂಗಡಿ ಇಟ್ಟುಕೊಂಡಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಲಾಟರಿಯಲ್ಲಿ ಬಂಪರ್ ಹೊಡೆದು ಈಗ ಲಕ್ಷಾಧೀಶರಾಗಿದ್ದಾರೆ. ಕೇರಳದ ಪಾರಾಯಿಲ್ ಮುಕ್ಕು ನಿವಾಸಿ ಬಾಬು ಎಂಬಾತ ಒಂದು ಸಣ್ಣ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಈತನಿಗೆ ಸುಮಾರು ಮೂರು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುವ ಚಟ. ಈ ಚಟದಿಂದಾಗಿ ಸಾಕಷ್ಟು ಸಾಲವೂ ಮಾಡಿಕೊಂಡಿದ್ದ.

ಈಗ ಆತ ಖರೀದಿಸಿ ಕೇರಳ ಸರ್ಕಾರ ಅಧಿಕೃತವಾಗಿ ನಡೆಸುವ ಶ್ರೀಶಕ್ತಿ ಲಾಟರಿ ಟಿಕೆಟ್ ಗೆ 60 ಲಕ್ಷ ರೂಪಾಯಿ ಬಂಪರ್ ಬಹುಮಾನ ಬಂದಿದೆ. ಇದರ ಜೊತೆಗೆ ಇತರೆ ಟಿಕೆಟ್ ಗಳಿಂದಲೂ ಆತ 30 ಸಾವಿರ ಬಹುಮಾನ ಪಡೆದಿದ್ದಾನೆ.

ಇದನ್ನೂ ಓದಿ: ಗುಜರಾತ್ ಚುನಾವಣೆ: ಇನ್ನೂ ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಲಾಟರಿಯಲ್ಲಿ ಬಂದ ಹಣದಿಂದ ಸಾಲವನ್ನು ತೀರಿಸಿ ಮದುವೆಯಾದ ಹೆಣ್ಣು ಮಕ್ಕಳಿಗೆ ಮನೆ ಕಟ್ಟಿಸಲು ಸಹಾಯ ಮಾಡುತ್ತೇನೆ, ತನ್ನ ಟೀ ಅಂಗಡಿಯನ್ನು ನವೀಕರಣಗೊಳಿಸುತ್ತೇನೆ ಎಂದು ಆತ ಹೇಳಿದ್ದಾನೆ.

Get Latest updates on WhatsApp. Send ‘Add Me’ to 8550851559

Related News