ಪ್ರೇಯಸಿಗಾಗಿ ಮುಸ್ಲಿಮನಾದ, ದುಡ್ಡಿಗಾಗಿ ಉಗ್ರನಾದ |News Mirchi

ಪ್ರೇಯಸಿಗಾಗಿ ಮುಸ್ಲಿಮನಾದ, ದುಡ್ಡಿಗಾಗಿ ಉಗ್ರನಾದ

ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಸೇರಿ ಇತ್ತೀಚೆಗೆ ಸೆರೆ ಸಿಕ್ಕ ಸಂದೀಪ್ ಶರ್ಮ ಅಲಿಯಾಸ್ ಅದಿಲ್ ನ ಕುತೂಹಲಕರ ಹಿನ್ನೆಲೆ ಬೆಳಕಿಗೆ ಬಂದಿದೆ. ಮೂಲತಃ ಹಿಂದೂ ಧರ್ಮದವನಾದ ಸಂದೀಪ್ ಶರ್ಮ, ಪವರ್ ಗ್ರಿಡ್ ಕೆಲಸಕ್ಕಾಗಿ ಕಾಶ್ಮೀರಕ್ಕೆ ಹೋಗಿದ್ದ. ಅಲ್ಲಿ ಮುಸ್ಲಿಂ ಯುವತಿಯೊಂದಿಗೆ ಆತನಿಗೆ ಪ್ರೀತಿ ಹುಟ್ಟಿತ್ತು. ಆದರೆ ಇಬ್ಬರ ಪ್ರೀತಿಗೆ ಧರ್ಮ ಅಡ್ಡಿ ಬಂದಿದ್ದರಿಂದ ಮಗಳನ್ನು ಕೊಟ್ಟು ಮದುವೆ ಮಾಡಲು ಯುವತಿಯ ತಂದೆ ಒಪ್ಪಿರಲಿಲ್ಲ.

ಎಟಿಎಂ ದರೋಡೆಗೆ ಉಗ್ರರಿಗೆ ನೆರವು ನೀಡಿದ್ದವನ ಬಂಧನ

ಹೀಗಾಗಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಸಂದೀಪ್ ಶರ್ಮ ಸ್ಥಳೀಯ ಮಸೀದಿಯಲ್ಲಿ ಮೌಲ್ವಿಗಳ ಸಮ್ಮುಖದಲ್ಲಿ ಇಸ್ಲಾಂಗೆ ಮತಾಂತರಗೊಂಡು ಅದಿಲ್ ಆಗಿ ಬದಲಾದ. ಮದುವೆಯಾದ ಹೊಸತರಲ್ಲಿ ಜೀವನ ಚೆನ್ನಾಗಿಯೇ ಇತ್ತು. ಡ್ರೈವಿಂಗ್, ವೆಲ್ಡಿಂಗ್ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದ. ಆದರೆ ಏನೇ ಕೆಲಸ ಮಾಡಿದರೂ ರೂ.300 ಕ್ಕಿಂತ ಹೆಚ್ಚು ಸಂಪಾದಿಸಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಹೆಚ್ಚು ಹಣ ಸಂಪಾದನೆ ಮಾಡಬೇಕು ಎಂಬುದು ಆತನ ತಲೆಯಲ್ಲಿ ಕೊರೆಯುತ್ತಿತ್ತು.

ಇದೇ ಸಮಯಕ್ಕೆ ಆತನಿಗೆ ಲಷ್ಕರ್-ಇ-ತೊಯ್ಬಾ ಉಗ್ರರೊಂದಿಗೆ ಪರಿಚಯವಾಯಿತು. ಬ್ಯಾಂಕುಗಳಿಂದ ಹಣ ಲೂಟಿ ಮಾಡಲು ಆತನ ವೆಲ್ಡಿಂಗ್ ಕೌಶಲ್ಯವನ್ನು ಬಳಸಿಕೊಳ್ಳಲು ಉಗ್ರರು ಭಾವಿಸಿದರು. ಇದಕ್ಕಾಗಿ ಆತನಿಗೆ ಭಾರಿ ಮೊತ್ತದ ಹಣ ನೀಡುವುದಾಗಿಯೂ ಹೇಳಿ ತಮ್ಮೊಂದಿಗೆ ಸೇರಿಸಿಕೊಂಡಿದ್ದರು. ದುಡ್ಡಿಗಾಗಿ ಉಗ್ರರೊಂದಿಗೆ ಕೈಜೋಡಿಸಿದ್ದ ಅದಿಲ್.

ವಿಗ್ರಹ ಮರು ಪ್ರತಿಷ್ಠಾಪನೆ ಸಮಯದಲ್ಲಿ ದೇಗುಲದಲ್ಲಿ ಸಿಕ್ಕ ರಹಸ್ಯ ಕೋಣೆ!

ಸಂದೀಪ್ ಶರ್ಮ ವಿಚಾರವನ್ನು ಆಳವಾಗಿ ತನಿಖೆ ಮಾಡುವುದಕ್ಕಾಗಿ ಪೊಲೀಸರು, ಆತನನ್ನು ದೆಹಲಿಯಿಂದ ಕಾಶ್ಮೀರಕ್ಕೆ ಕೆಲಸಕ್ಕೆ ಕಳುಹಿಸಿದ್ದ ಗುತ್ತಿಗೆದಾರನ ವಿಚಾರಣೆ ನಡೆಸಿದರು. ಸಂದೀಪ್ ಶರ್ಮನೊಂದಿಗೆ ಇನ್ನೂ ಮೂವರನ್ನು ಕಾಶ್ಮೀರಕ್ಕೆ ಕೆಲಸಕ್ಕೆ ಕಳಹಿಸಿದ್ದು, ಮೂವರು ಮಾತ್ರ ವಾಪಸಾದರು, ಆದರೆ ಸಂದೀಪ್ ಮಾತ್ರ ಮುಸ್ಲಿಂ ಯುವತಿಯ ಪ್ರೀತಿಯಲ್ಲಿ ಬಿದ್ದು ಅಲ್ಲಿಯೇ ಉಳಿದುಕೊಂಡ ಎಂದು ಗುತ್ತಿಗೆದಾರ ಪೊಲಿಸರಿಗೆ ಹೇಳಿದ್ದಾನೆ.

Loading...
loading...
error: Content is protected !!