ನನ್ನ ಕುಟುಂಬದಲ್ಲಿ ಗಾಂಧಿ ನೆಹರೂಗಳಿಲ್ಲ, ಆದರೂ ಈ ಹಂತಕ್ಕೆ... |News Mirchi

ನನ್ನ ಕುಟುಂಬದಲ್ಲಿ ಗಾಂಧಿ ನೆಹರೂಗಳಿಲ್ಲ, ಆದರೂ ಈ ಹಂತಕ್ಕೆ…

ನಮ್ಮ ಕುಟುಂಬದಲ್ಲಿ ಗಾಂಧಿಗಳು, ನೆಹರೂಗಳು ಇಲ್ಲದಿದ್ದರೂ ಉಪರಾಷ್ಟ್ರಪತಿ ಅಭ್ಯರ್ಥಿ ಹಂತಕ್ಕೆ ಬೆಳೆಯಲು ಅವಕಾಶ ಬಿಜೆಪಿ ನೀಡಿದೆ ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ. ವಿಜಯವಾಡದಲ್ಲಿ ವೆಂಕಯ್ಯನಾಯ್ಡು ರವರಿಗೆ ಆಯೋಜಿಸಿದ್ದ ಆತ್ಮೀಯ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕಂದಿನ ಘಟನೆಗಳು, ರಾಜಕೀಯ ಪಯಣದ ಕುರಿತು ನೆನಪಿಸಿಕೊಂಡರು. ರೈತ ಕುಟುಂಬದಲ್ಲಿ ಜನಿಸಿದ ತಾವು ತುಂಬಾ ಕಷ್ಟ ಎದುರಿಸಿದ್ದಾಗಿ ಹೇಳಿದರು.

ವಾಜಪೇಯಿ ಬಂದಾಗಿ ರಿಕ್ಷಾದಲ್ಲಿ ಸುತ್ತಿ ಪ್ರಚಾರ ನಡೆಸಿದ್ದೆ, ಕೆಲ ದಿನಗಳ ನಂತರ ಅವರ ಪಕ್ಕದಲ್ಲೇ ಕುಳಿತುಕೊಳ್ಳುವ ಅವಕಾಶ ಬಂತು. ತನಗಿಂತಾ ಹಿರಿಯರು ವಿಧಾನಸಭೆಯಲ್ಲಿದ್ದರೂ ಪಕ್ಷದ ನಾಯಕನಾಗಿ ನನ್ನನ್ನೇ ಆಯ್ಕೆ ಮಾಡಿದ್ದರು ಎಂದು ವೆಂಕಯ್ಯನಾಯ್ಡು ವಿವರಿಸಿದರು. ದೇಶದಲ್ಲಿ ಪ್ರಧಾನಿ ನಂತರ ಹೆಚ್ಚು ಜವಾಬ್ದಾರಿ ಇರುವ ಹುದ್ದೆ ಎಂದರೆ ಆಡಳಿತ ಪಕ್ಷದ ಅಧ್ಯಕ್ಷರಾಗುವುದು. ಆ ಜವಾಬ್ದಾರಿಯನ್ನೂ ತಾವು ನಿರ್ವಹಿಸಿರುವುದಾಗಿ ಅವರು ಹೇಳಿದರು.

ಚೀನಾ ನಾಯಕತ್ವವೇ ಬೆಸ್ಟ್ ಎಂದ ಅರುಣ್ ಶೌರಿ

2019 ರಲ್ಲಿಯೂ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಬೇಕು. ಅವರು ಮತ್ತೆ ಬಂದರೆ ಅಸಮಾನತೆ ಕಡಿಮೆಯಾಗಿ, ದೇಶ ಅಭಿವೃದ್ಧಿಯಾಗುತ್ತದೆ ಎಂದರು. ದೇಶ ಮುಂದುವರೆಯಬೇಕಾದರೆ ಸರಿಯಾದ ನಾಯಕತ್ವವಿರಬೇಕು. ಆ ಗುಣಗಳು ಮೋದಿಯವರಲ್ಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೆಂಕಯ್ಯನಾಯ್ಡು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ ಎಂದು ನೀವು ಊಹಿಸಿದ್ದಿರಾ? ಎಂದು ತನ್ನ ಪತ್ನಿಯನ್ನು ಮೋದಿಯವರು ಕೇಳಿದಾಗ, ಆಕೆ ನಿರೀಕ್ಷಿಸಿರದ ಉತ್ತರ ನೀಡಿದರು ಎಂದು ಹೇಳಿದರು.

ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ

Loading...
loading...
error: Content is protected !!