ನಾನೂ ತಪ್ಪು ಮಾಡಿದ್ದೇನೆ: ರಾಹುಲ್ |News Mirchi

ನಾನೂ ತಪ್ಪು ಮಾಡಿದ್ದೇನೆ: ರಾಹುಲ್

ಪಕ್ಷದಲ್ಲಿ ಈ ಹಿಂದೆ ಕೆಲ ತಪ್ಪುಗಳಾಗಿವೆ, ನಾನೂ ಕೆಲವು ತಪ್ಪು ಮಾಡಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಎಲ್ಲರಂತೆ ನಾನೂ ಒಬ್ಬ ಮನುಷ್ಯನಾಗಿದ್ದು, ಆಗಾಗ ತಪ್ಪು ಮಾಡುವುದು ಸಹಜ ಎಂದ ರಾಹುಲ್, ಭವಿಷ್ಯತ್ತಿನಲ್ಲಿ ಅಂತಹ ತಪ್ಪುಗಳು ಮಾಡುವುದಿಲ್ಲ, ಪಕ್ಷದಲ್ಲೂ ಅಂತಹ ತಪ್ಪುಗಳು ಮರುಕಳಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಬಹ್ರೇನ್ ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದ ರಾಹುಲ್, ನಾನೂ ಮನುಷ್ಯನಾಗಿರುವುದರಿಂದ ತಪ್ಪು ಮಾಡಿರುವುದಾಗಿ ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ. ನಾವೆಲ್ಲಾ ಮನುಷ್ಯರು ಹಾಗಾಗಿ ತಪ್ಪು ಮಾಡುವುದು ಸಹಜ. ನೀವು ಸ್ವಲ್ಪ ಅಂತರವಿದೆ ಎಂದು ಕೇಳಿದಿರಿ. ಆದರೆ ಆ ಗ್ಯಾಪ್ ಮಾಧ್ಯಮಗಳಲ್ಲಿ ಮಾತ್ರವಿದೆ. ಮಾಧ್ಯಮಗಳು ಒಂದು ಕಡೆ ಮಾತ್ರ ಪ್ರಚಾರ ನೀಡುತ್ತಿವೆ. ಗುಜರಾತ್ ನಲ್ಲಿ ಬಿಜೆಪಿ ಈ ಹಿಂದೆ ಎಷ್ಟು ಪ್ರಬಲವಾಗಿತ್ತೋ ನಿಮಗೆ ತಿಳಿದಿದೆ. ಆದರೆ ಈ ಬಾರಿ ಆ ಪಕ್ಷ ಗೆಲ್ಲಲು ಪರದಾಡಿತು ಎಂಬುದು ನಿಮಗೆಲ್ಲಾ ತಿಳಿದದ್ದೇ ಎಂದು ರಾಹುಲ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಅನುಭವ ಮತ್ತು ಯುವಕರ ಸಮ್ಮಿಶ್ರಣವಿದೆ. ಭಾರತಕ್ಕೆ ಒಂದು ಹೊಸ ದೃಷ್ಟಿಕೋನವನ್ನು ನೀಡುವುದು, ಜನರಿಗೆ ಒಂದು ಹೊಸ ಪಕ್ಷ ಕಾಂಗ್ರೆಸ್ ಪಕ್ಷವನ್ನು ನೀಡುವುದು ನಮ್ಮ ಗುರಿ. ಹೊಸ ಕಾಂಗ್ರೆಸ್ ಅನ್ನು ನಿಮಗೆ ನೀವು ಕೊಟ್ಟಾಗ ಬಿಜೆಪಿಯನ್ನು ಸೋಲಿಸುವುದು ಕಷ್ಟವೇನಲ್ಲ. ನಾವು ತಪ್ಪುಗಳನ್ನು ಮಾಡಿದ್ದೇವೆ, ಆದರೆ ಪಕ್ಷದಲ್ಲಿ ನಾವೂ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಹೇಳಿದರು.

ಹೊಸ ನೋಟು ರದ್ದು ನಿರ್ಧಾರವನ್ನು ಘೋಷಿಸಿದಾಗ ಜಿಡಿಪಿ ದರ ಶೇ.2 ರಷ್ಟು ಕುಸಿಯುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದೇ ಭವಿಷ್ಯ ನುಡಿದಿದ್ದರು ಎಂದು ರಾಹುಲ್ ನೆನಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ, ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಮತ್ತು ಜಾಗತಿಕ ಆರೋಗ್ಯ ವ್ಯವಸ್ಥೆಗೆ ಒಂದು ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವುದು ಈ ಮೂರೂ ವಿಷಯಗಳ ಮೇಲೆ ಗಮನ ಹರಿಸುತ್ತೇವೆ ಎಂದು ರಾಹುಲ್ ಹೇಳಿದರು. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬಿಜೆಪಿಯನ್ನು ಒತ್ತಾಯಿಸುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಖಚಿತವಾಗಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ಪಡೆಯುತ್ತೇವೆ ಎಂದರು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!