ಫೇಸ್ಬುಕ್ ನಲ್ಲಿ ನಿಂದನೆ, ಭಾರತದಲ್ಲಿ ಬಂದಿಳಿಯುತ್ತಿದ್ದಂತೆ ವ್ಯಕ್ತಿಯ ಬಂಧನ – News Mirchi
We are updating the website...

ಫೇಸ್ಬುಕ್ ನಲ್ಲಿ ನಿಂದನೆ, ಭಾರತದಲ್ಲಿ ಬಂದಿಳಿಯುತ್ತಿದ್ದಂತೆ ವ್ಯಕ್ತಿಯ ಬಂಧನ

ಬೆಂಗಳೂರು: ಫೇಸ್ಬುಕ್ ನಲ್ಲಿ 2015 ರ ಅಕ್ಟೋಬರ್ ನಲ್ಲಿ ಮಹಿಳೆಯೊಬ್ಬಳ ಮೇಲೆ ಅವಹೇಳನಕಾರಿ ಕಮೆಂಟ್ ಮಾಡಿದ ಆರೋಪದ ಮೇಲೆ, ಆರೋಪಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ದುಬೈನಲ್ಲಿ ಕೆಲಸ ಮಾಡುತ್ತಿದ್ದ ತುಮಕೂರಿನ ಮಧುಸೂಧನ್ ಗೌಡ ಎಂಬುವವರು ಅವಹೇಳನಕಾರಿ ಕಮೆಂಟ್ ಮಾಡಿದ್ದಾರೆಂದು ಚೇತನಾ ತೀರ್ಥಹಳ್ಳಿ ಎಂಬಾಕೆ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಳು. ಮಧುಸೂಧನ್ ಗೌಡ ದುಬೈನಲ್ಲಿದ್ದುದರಿಂದ, ಆತನನ್ನು ಬಂಧಿಸಲು ಭಾರತಕ್ಕೆ ವಾಪಸಾಗುವುದನ್ನು ಕಾಯುತ್ತಿದ್ದ ಪೊಲೀಸರು, ಸೋಮವಾರ ಆರೋಪಿ ಭಾರತಕ್ಕೆ ಬರುತ್ತಿರುವ ಮಾಹಿತಿ ಪಡೆದು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಬಂಧಿಸಿದ್ದಾರೆ.

ವಿವಿಧ ಹೆಸರುಗಳಲ್ಲಿ ಚೇತನಾ ನಾಲ್ಕು ಫೇಸ್ಬುಕ್ ಖಾತೆಗಳನ್ನು ಹೊಂದಿದ್ದು, ಅದರಲ್ಲಿ ಒಂದು ಖಾತೆಯ ಫೆಸ್ಬುಕ್ ಪುಟದಲ್ಲಿ ಆರೋಪಿಯು ಕೆಟ್ಟ ಪದಗಳಲ್ಲಿ ನಿಂದಿಸಿದ್ದನು ಎಂದು ಆಕೆ ದೂರು ನೀಡಿದ್ದಳು. ಗೋಮಾಂಸ ಸೇವನೆ ನಿಷೇಧ ವಿರೋಧಿಸಿ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆಯ ಪರ ಬರೆದಿದ್ದ ಆಕೆ, ಪ್ರತಿಭಟನೆಯ ಫೋಟೋಗಳನ್ನು ಆಕೆ ಶೇರ್ ಮಾಡಿದ್ದಳು.

ಇದೇ ವೇಳೆ ಇದೇ ರೀತಿಯ ಅವಹೇಳನಕಾರಿ ಬರಹಗಳ ವಿರುದ್ಧ ದಾಖಲಾಗಿರುವ ದೂರುಗಳ ವಿಷಯದಲ್ಲಿ ಪೊಲೀಸರು ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಬಂಧಿಸಿಲ್ಲವೇಕೆ ಎಂಬ ಪ್ರಶ್ನೆಗಳೂ ಕೇಳಿ ಬರುತ್ತಿವೆ. ಅದರಲ್ಲೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅಸಭ್ಯವಾಗಿ ಬಿಂಬಿಸಿದ್ದಕ್ಕೆ ಪ್ರಭಾ ಬೆಳವಂಗಲಾ ವಿರುದ್ಧ ದಾಖಲಾದ ದೂರಿನ ಒಂದು ಉದಾಹರಣೆ ಕೊಡುತ್ತಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!