ಶಾಲೆಗಳಲ್ಲಿ ಎಸ್ ಸರ್ ಬದಲಿಗೆ “ಜೈ ಹಿಂದ್”, ಮಧ್ಯಪ್ರದೇಶದಲ್ಲೊಂದು ಪ್ರಯೋಗ – News Mirchi

ಶಾಲೆಗಳಲ್ಲಿ ಎಸ್ ಸರ್ ಬದಲಿಗೆ “ಜೈ ಹಿಂದ್”, ಮಧ್ಯಪ್ರದೇಶದಲ್ಲೊಂದು ಪ್ರಯೋಗ

ಇನ್ನು ಮುಂದೆ ಶಾಲೆಗಳಲ್ಲಿ ಶಿಕ್ಷಕರು ಹಾಜರಾತಿ ಕೂಗುವಾಗ ಎಸ್ ಸರ್, ಎಸ್ ಮೇಡಮ್ ಎನ್ನುವ ಬದಲಿಗೆ ಜೈಹಿಂದ್ ಎನ್ನಬೇಕು ಎಂದು ಸಾತ್ನಾ ಜಿಲ್ಲೆಯ ಖಾಸಗಿ ಶಾಲೆಗಳಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ವಿಜಯ್ ಶಾ ಸೂಚಿಸಿದ್ದಾರೆ.

ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ ಎಂದು ಅವರ ಅಭಿಪ್ರಾಯ. ಈ ಪ್ರಯೋಗ ಯಶಸ್ವಿಯಾದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅನುಮತಿ ಪಡೆದು ರಾಜ್ಯಾದ್ಯಂತ ಇರುವ ಶಾಲೆಗಳಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದು ಖಾಸಗಿ ಶಾಲೆಗಳಿಗೆ ನೀಡಿರುವ ಒಂದು ಸಲಹೆ ಮಾತ್ರ ಎಂದು ಹೇಳಿರುವ ಸಚಿವರು, ಇದು ದೇಶಭಕ್ತಿಗೆ ಸಂಬಂಧಿಸಿದ ವಿಷಯವಾದ್ದರಿಂದ ನನ್ನ ಸಲಹೆಯನ್ನು ಪಾಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ಚಿತ್ರಕೂಟದಲ್ಲಿ ನಡೆದ ಪ್ರಾಂಶುಪಾಲರು, ಶಿಕ್ಷಕರು ವಿಭಾಗೀಯ ಮಟ್ಟದ ಸಭೆಯಲ್ಲಿ ಸಚಿವರು ಈ ಪ್ರಕಟಣೆ ನೀಡಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...