ಉತ್ತಮ ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್ ಫೋನ್ ಬೆಲೆ ರೂ.4,999

ದೇಶೀಯ ಮೊಬೈಲ್ ತಯಾರಿಕಾ ಕಂಪನಿ “ಮಾಫೆ” ಕಡಿಮೆ ದರದಲ್ಲಿ 4ಜಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಕೈಗೆಟುಕುವ ದರಗಳಲ್ಲಿ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ ಮಾಫೆ, ಇದೀಗ “ಶೈನ್ ಎಂ815” ಹೆಸರಿನಲ್ಲಿ ಸ್ಮಾರ್ಟ್ಫೋನ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರ ಬೆಲೆಯನ್ನು ರೂ. 4,999 ಗೆ ನಿಗದಿಪಡಿಸಲಾಗಿದೆ.

ಉತ್ತಮ ಬ್ಯಾಟರಿ ಸಾಮರ್ಥ್ಯದೊಂದಿಗೆ ನಾವು ಈ ಸ್ಮಾರ್ಟ್ ಫೋನ್ ಅನ್ನು ಗ್ರಾಹಕರ ಮುಂದೆ ತಂದಿದ್ದೇವೆ ಎಂದು ಕಂಪನಿ ಹೇಳುತ್ತಿದೆ. ಡ್ಯುಯೆಲ್ ಸಿಮ್, 4000 mAh ಬ್ಯಾಟರಿಯೊಂದಿಗೆ 15 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆಯಂತೆ.

ಮಾಫೆ ‘ಶೈನ್ ಎಂ 815’ ಸ್ಮಾರ್ಟ್ಫೋನ್ ವೈಶಿಷ್ಟ್ಯಗಳು

5 ಇಂಚಿನ ಡಿಸ್’ಪ್ಲೇ (480 x 854 ರೆಸಲ್ಯೂಷನ್)
1.3 GHz ಕ್ವಾಡ್-ಕೋರ್ ಸ್ಪೆಡ್ ಟ್ರಮ್ ಪ್ರೊಸೆಸರ್
ಆಂಡ್ರಾಯ್ಡ್ 7.0 ನೌಗಟ್
1 ಜಿಬಿ ರ್ಯಾಮ್
16 ಜಿಬಿ ಇಂಟರ್ನಲ್ ಮೆಮೊರಿ
64 GB ವರೆಗೆ ವಿಸ್ತರಿಸಬಲ್ಲ ಸಾಮರ್ಥ್ಯ
ಎಲ್ಇಡಿ ಫ್ಲಾಶ್ ನೊಂದಿಗೆ 5 ಎಂಪಿ ಹಿಂಬದಿಯ ಕ್ಯಾಮರಾ
2 ಎಂಪಿ ಸೆಲ್ಫೀ ಕ್ಯಾಮರಾ
4000 mAh ಬ್ಯಾಟರಿ

[ಇದನ್ನೂ ಓದಿ: 500 ರೂಪಾಯಿಗೇ ಕ್ರೆಡಿಟ್ ಕಾರ್ಡ್ ವಿವರ ಖರೀದಿಸಿ ಹಣ ಲಪಟಾಯಿಸುತ್ತಿದ್ದ ಕದೀಮರು]

Get Latest updates on WhatsApp. Send ‘Add Me’ to 8550851559