maha-shivajyothi-cmy

ಕಾಡುಮಲ್ಲೇಶ್ವರ ಬೆಟ್ಟದಲ್ಲಿ ಬೆಳಗಿದ ಮಹಾ ಶಿವಜ್ಯೋತಿ

ಚಿಂತಾಮಣಿ, ಫೆ.13: ಶಿವ ರಾತ್ರಿ ಹಬ್ಬದ ಪ್ರಯುಕ್ತ ತಮಿಳುನಾಡಿನ ತಿರುವಣ್ಣಾಮಲೈ ನಲ್ಲಿ ಬೆಳಗಿಸುವ ಮಹಾ ಶಿವಜ್ಯೋತಿ ಮಾದರಿಯಲ್ಲಿ ಮಂಗಳವಾರ ಚಿಂತಾಮಣಿ ನಗರ ಹೊರವಲಯದ ಕಾಡು ಮಲ್ಲೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾ ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ತಾಲೂಕಿನ ಎಲ್ಲಾ ಶಿವ ದೇವಾಲಯಗಳಿಂದ ಜ್ಯೋತಿಗಳನ್ನು ಸಂಗ್ರಹಿಸಿ ನಗರ ಅಜಾದ್ ಚೌಕದ ಶ್ರೀ ಹರಿಹರೇಶ್ವರ ದೇವಾಲಯಕ್ಕೆ ತರಲಾಯಿತು. ಅಲ್ಲಿ ಎಲ್ಲಾ ಜ್ಯೋತಿಗಳನ್ನು ಮಹಾಜ್ಯೋತಿಯನ್ನಾಗಿಸಿ ಮಧ್ಯಾಹ್ನ 4 ಗಂಟೆಗೆ ಜ್ಯೋತಿಯನ್ನು ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ವಂದೇ ಮಾತರಂ ಘೋಷಣೆಯೊಂದಿಗೆ ಕಾಡು ಮಲ್ಲೇಶ್ವರ ಬೆಟ್ಟಕ್ಕೆ ತಂದು ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಭಾಗವಹಿಸಿದ್ದರು.

Get Latest updates on WhatsApp. Send ‘Subscribe’ to 8550851559