ಶಿವರಾತ್ರಿ ಪ್ರಯುಕ್ತ ಮಹಾ ಜ್ಯೋತಿ ಬೆಳಗಿಸಿ ಮಿಂದೆದ್ದ ಭಕ್ತರು

ಚಿಂತಾಮಣಿ, ಫೆ. 14 : ಶಿವರಾತ್ರಿ ಹಬ್ಬದ ಪ್ರಯುಕ್ತ ಚಿಂತಾಮಣಿ ನಗರದ ಕಾಡು ಮಲ್ಲೇಶ್ವರಸ್ವಾಮಿ ಬೆಟ್ಟದ ಮೇಲೆ ಮಹಾ ಜ್ಯೋತಿಯನ್ನು ಬೆಳೆಗಿಸುವ ಕಾರ್ಯಕ್ರಮದಲ್ಲಿ  ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬೆಳಗಿಸುವ ಮಹಾಶಿವ ಜ್ಯೋತಿ ಮಾದರಿಯಲ್ಲಿ ಮಹಾ ಜ್ಯೋತಿಯನ್ನು ಬೆಳೆಗಿಸಿ ನೂರಾರು ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.

ನಗರದ ವಿವಿಧ ಭಾಗಗಳ ಶಿವ ದೇವಾಲಯಗಳಿಂದ ಜ್ಯೋತಿಗಳನ್ನು ನಗರದ ಆಜಾದ್ ಚೌಕದ ಶ್ರೀ ಹರಿಹರೇಶ್ವರ ದೇವಾಲಯಕ್ಕೆ ತಂದು ಮಹಾ ಜ್ಯೋತಿಯನ್ನಾಗಿಸಿ, ಜ್ಯೋತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ಕಾಡುಮಲ್ಲೇಶ್ವರ ಬೆಟ್ಟ ತಲುಪಿದರು.

ಭಾರತದ ಆಮದು ತೆರಿಗೆಗೆ ಟ್ರಂಪ್ ಅಸಮಾಧಾನ

ನಾಡಿನ ಎಲ್ಲಾ ಸಂಕ್ಷಷ್ಟಗಳನ್ನು ದೂರಗೊಳಿಸುವಂತೆ ಹಾಗೂ ಮಳೆ ಬೆಳೆಗಳು ಸಕಾಲಕ್ಕೆ ದಯಪಾಲಿಸೆಂದು ಬೇಡಿದ ಭಕ್ತರು, ಸುಮಾರು ನೂರು ಕೆಜಿ ಎಳ್ಳೆಣ್ಣೆ ಹಾಗೂ 25 ಕೆಜಿ ತುಪ್ಪದ ಎಣ್ಣೆಯಿಂದ ನಿರ್ಮಿಸಿದ್ದ ಬೃಹದಾಕಾರದ ಮಹಾ ದೀಪಕ್ಕೆ ವಿಶೇಷ ಪೂಜೆಯನ್ನು ಮಾಡಿ ಬೆಳಗಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ದೇವರ ಈ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get Latest updates on WhatsApp. Send ‘Subscribe’ to 8550851559