Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ಅಯೋಧ್ಯೆ ಪ್ರಕರಣದ ಪ್ರಮುಖ ಕಕ್ಷಿದಾರ ಮಹಂತ್ ಭಾಸ್ಕರ್ ದಾಸ್ ಇನ್ನಿಲ್ಲ – News Mirchi

ಅಯೋಧ್ಯೆ ಪ್ರಕರಣದ ಪ್ರಮುಖ ಕಕ್ಷಿದಾರ ಮಹಂತ್ ಭಾಸ್ಕರ್ ದಾಸ್ ಇನ್ನಿಲ್ಲ

ಬಾಬ್ರಿ ಮಸೀದಿ-ರಾಮ ಮಂದಿರ ವಿವಾದದ ಆರಂಭದಿಂದ ಹಿಂದುಗಳ ಪರ ಹೋರಾಡುತ್ತಿರದ್ದ ಮಹಂತ್ ಭಾಸ್ಕರ್ ದಾಸ್(89) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರ್ಮೋಹಿ ಅಖಾಡಾಗೆ ಅವರು ಪ್ರಧಾನ ಅರ್ಚಕರಾಗಿದ್ದರು.

ದಾಸ್ ಅವರ ನಿಧನದಿಂದಾಗಿ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಹಿಂದು ಮತ್ತು ಮುಸ್ಲಿಮರ ಪರವಾಗಿದ್ದ ಮೊದಲ ಕಕ್ಷಿದಾರರು ಸಾವನ್ನಪ್ಪಿದಂತಾಗಿದೆ. ಕಳೆದ ವರ್ಷ ಮುಸ್ಲಿಮರ ಪರ ವಾದಿಸುತ್ತಿದ್ದ ಹಷೀಮ್ ಅನ್ಸಾರಿ(95) ಸಾವನ್ನಪ್ಪಿದ್ದರು. ಇವರಿಬ್ಬರ ನಿಧನದ ಹಿನ್ನೆಲೆಯಲ್ಲಿ ಅವರ ನಿಕಟವರ್ತಿಗಳು ಈ ಕೇಸನ್ನು ಮುಂದುವರೆಸುತ್ತಾರೆ ಎನ್ನಲಾಗುತ್ತಿದೆ. ವಿವಾದಿತ ರಾಮ ಜನ್ಮಭೂಮಿ ಕುರಿತು ಅವರು ಮೊದಲು 1959 ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮಹಂತ್ ದಾಸ್ ಅವರಿಗೆ ಶುಕ್ರವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಘಾಜಿಯಾಬಾದ್ ನಲ್ಲಿನ ಹರ್ಷನ್ ಹಾರ್ಟ್ ಇನ್ಸ್’ಟಿಟ್ಯೂಟ್ ಗೆ ದಾಖಲಿಸಿದ್ದರು. ಎದೆನೋವಿನ ಜೊತೆ ಇಂದು ಮುಂಜಾನೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಯಿತು. ವೈದ್ಯರು ನೀಡಿದ ಚಿಕಿತ್ಸೆಗೆ ಸ್ಪಂದಿಸದೆ ಅವರು ಕಣ್ಮುಚ್ಚಿದ್ದಾರೆ.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!