ಬಸ್ಸಿನಲ್ಲಿ ಕಿಸ್ ಮಾಡಿ ಅರೆಸ್ಟ್ ಆದ ಬಿಜೆಪಿ ಮುಖಂಡ – News Mirchi

ಬಸ್ಸಿನಲ್ಲಿ ಕಿಸ್ ಮಾಡಿ ಅರೆಸ್ಟ್ ಆದ ಬಿಜೆಪಿ ಮುಖಂಡ

ಉದ್ಯೋಗ ಕೊಡಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚಿಸಿದ್ದಾರೆ ಎಂದು 20 ವರ್ಷದ ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿ ಬಿಜೆಪಿ ಮುಖಂಡನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಚಲಿಸುತ್ತಿರುವ ಬಸ್ಸಿನಲ್ಲಿ ಬಿಜೆಪಿ ಮುಖಂಡ ರವೀಂದ್ರ ಬವಂಥಾಡೆ ಶಾಲಾ ಶಿಕ್ಷಕಿಗೆ ಚುಂಬಿಸಲು ಪ್ರಯತ್ನಿಸುತ್ತಿದ್ದ ವೀಡಿಯೋ ಬಹಿರಂಗವಾದ ನಂತರ ಆಕೆ ಅತ್ಯಾಚಾರ ನೀಡಿದ್ದಾರೆ.

ಬಂಧಿತ ಬಿಜೆಪಿ ಮುಖಂಡ ಬವಂಥಾಡೆ ಈ ಹಿಂದೆ ಅರ್ಮೋರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯೂ ಆಗಿ ಕಾರ್ಯನಿರ್ವಹಿಸಿದ್ದರು. ಕೆಲ ದಿನಗಳ ಹಿಂದೆ ನಾಗಪುರದಿಂದ ಗಡ್ಚಿರೋಲಿಯಿಂದ ಬಸ್ಸಿನಲ್ಲಿ ಹಿಂದಿರುಗತ್ತಿದ್ದಾಗ ಈ ಘಟನೆ ನಡೆದಿತ್ತು. ಬಸ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಬಿಜೆಪಿ ಮುಖಂಡ ಇತರೆ ಪ್ರಯಾಣಿಕರೆದುರೇ ಮಹಿಳೆಗೆ ಒತ್ತಾಯಪೂರ್ವಕವಾಗಿ ಮುತ್ತಿಡಲು ಪ್ರಯತ್ನಿಸುತ್ತಿದ್ದದ್ದು ಸೆರೆಯಾಗಿತ್ತು.

ಬವಂಥಾಡೆಯನ್ನು ಜುಲೈ 6 ವರೆಗೂ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಂಧಿತ ವ್ಯಕ್ತಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಮತ್ತು ಗಡ್ಚಿರೋಲಿ ಲೋಕಸಭಾ ಸದಸ್ಯ ಅಶೋಕ್ ನೆಟೆ ಹೇಳಿದ್ದಾಋಎ.

Loading...