ಪತ್ತೆಯಾದ ಭಾರಿ ಮೊತ್ತದ ನಗದು, ಸಂಕಷ್ಟದಲ್ಲಿ ಬಿಜೆಪಿ ಸಚಿವ |News Mirchi

ಪತ್ತೆಯಾದ ಭಾರಿ ಮೊತ್ತದ ನಗದು, ಸಂಕಷ್ಟದಲ್ಲಿ ಬಿಜೆಪಿ ಸಚಿವ

ಮುಂಬೈ: ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಕಪ್ಪು ಹಣ ನಿರ್ಮೂಲನೆ ಮಾಡಲು 500, 1000 ನೋಟು ರದ್ದು ಮಾಡಿದ್ದು ನಮಗೆಲ್ಲಾ ಗೊತ್ತಿರುವುದೇ. ಈಗ ಅದೇ ಪಕ್ಷದ ಸಚಿವರೊಬ್ಬರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಚಿವರಿಗೆ ಸೇರಿದ 91 ಲಕ್ಷ 50 ಸಾವಿರ ಮೌಲ್ಯದ 500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಸಿಕ್ಕ ನಗದು ತಮಗೇ ಸೇರಿದ್ದು ಎಂದು ಮಹಾರಾಷ್ಟ್ರದ ಸಹಕಾರ ಸಚಿವ ಸುಭಾಷ್ ದೇಶ್‌ಮುಖ್ ಹೇಳಿದ್ದಾರೆ. ವ್ಯಾಪಾರ ವಹಿವಾಟಿಗಾಗಿ ಆ ಹಣವನ್ನು ತಮ್ಮ ಬಳಿ ಇರುಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ತಿಂಗಳ 8 ರಂದು ಇದ್ದಕ್ಕಿದ್ದಂತೆ ನೋಟು ರದ್ದುಗೊಳಿಸಿದರು. ತಾನು ಆ ಹಣವನ್ನು ಅಕ್ರಮವಾಗಿ ಇಟ್ಟುಕೊಂಡಿಲ್ಲ, ಯಾವುದೇ ತನಿಖೆಗೂ ಸಿದ್ಧ ಎಂದು ಅವರು ಹೇಳಿದ್ದಾರೆ.

ಸೋಲಾಪುರದಲ್ಲಿ ಸಚಿವರಿಗೆ ಸೇರಿದ ಎನ್ಜಿಒ ವಾಹನದಲ್ಲಿ ಹಣವನ್ನು ಸಾಗಿಸುತ್ತಿದ್ದಾಗ ಪೊಲೀಸರು ಹಿಡಿದಿದ್ದಾರೆ. ಸಾಮಾನ್ಯವಾಗಿ ನಡೆಸುವ ತನಿಖೆಯಲ್ಲಿಯೇ 500, 1000 ಮುಖಬೆಲೆಯ ಭಾರೀ ಮೊತ್ತದ ಹಣವನ್ನು ಪತ್ತೆ ಹಚ್ಚಲಾಗಿದ್ದು, ಹಣವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ಹುಸ್ಮಾನಾಬಾದ್ ಕಲೆಕ್ಟರ್ ಪ್ರಶಾಂತ್ ನಾರ್ನವೇರ್ ದೃಢಪಡಿಸಿದ್ದಾರೆ. ಈ ಹಣವನ್ನು ಜಿಲ್ಲಾ ಟ್ರೆಜರಿಯಲ್ಲಿ ಡಿಪಾಸಿಟ್ ಮಾಡಿದ್ದಾಗಿ ಅವರು ಹೇಳಿದ್ದಾರೆ. ಈ ಕುರಿತು ತನಿಖೆ ಮಾಡುವಂತೆ ಪೊಲೀಸರಿಗೆ ಮತ್ತು ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಅವರು ಹೇಳಿದರು.

ಪೊಲೀಸರು ವಶಪಡಿಸಿಕೊಂಡ ಹಣ ತನ್ನದು, ಅದನ್ನು ಉದ್ಯೋಗಿಗಳಿಗೆ ವೇತನ ನೀಡಲು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಮೊದಲು ಲೋಕಮಂಗಳ್ ಗ್ರೂಪ್ ಉದ್ಯೋಗಿ ಹೇಳಿದ್ದರು. ಅದರೆ ಮಾರನೆಯ ದಿನ ಅಂದರೆ ಶುಕ್ರವಾರ ಸಚಿವ ದೇಶಮುಖ್ ಆ ಹಣ ತಮಗೇ ಸೇರಿದ್ದು ಎಂದು ಹೇಳಿದ್ದಾರೆ.

Loading...
loading...
error: Content is protected !!