ಮಹಾರಾಷ್ಟ್ರ: 1.5 ಲಕ್ಷದವರೆಗಿನ ಸಾಲ ಸಂಪೂರ್ಣ ಮನ್ನಾ, 34 ಸಾವಿರ ಕೋಟಿ ಪ್ಯಾಕೇಜ್ – News Mirchi

ಮಹಾರಾಷ್ಟ್ರ: 1.5 ಲಕ್ಷದವರೆಗಿನ ಸಾಲ ಸಂಪೂರ್ಣ ಮನ್ನಾ, 34 ಸಾವಿರ ಕೋಟಿ ಪ್ಯಾಕೇಜ್

ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದ ರೈತರ ಸಾಲ ಮನ್ನಾ ಮಾಡಲು ರೂ.34 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ರೂ.1,50,000 ವರೆಗಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಿರುವುದಾಗಿ ಫಡ್ನವೀಸ್ ಹೇಳಿದ್ದಾರೆ. ಈಗಾಗಲೇ ಸಾಲ ಮರುಪಾವತಿ ಮಾಡಿರುವ ರೈತರಿಗೆ ಅನುಕೂಲವಾಗುವಂತೆ ಶೇ.25 ರಷ್ಟು ಸಾಲವನ್ನು ಮತ್ತೆ ನೀಡುವುದಾಗಿ ಘೋಷಿಸಿದ್ದಾರೆ. [ರೈತರ ಬೇಡಿಕೆಗೆ ಕೊನೆಗೂ ಮಣಿದ ಸಿದ್ದರಾಮಯ್ಯ, 50 ಸಾವಿರವರೆಗಿನ ಸಾಲ ಮನ್ನಾ]

ಸರ್ಕಾರದ ಸಾಲ ಮನ್ನಾ ಕ್ರಮದಿಂದ ಸುಮಾರು 89 ಲಕ್ಷ ರೈತರಿಗೆ ಅನುಕೂಲವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದಾರೆ. ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂಬುದರ ಅರಿವಿದೆ. ಆದ್ದರಿಂದ ನಮ್ಮ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಎಂದು ಫಡ್ನವೀಸ್ ಹೇಳಿದರು. ಸಾಲ ಮನ್ನಾ ಕ್ರಮಕ್ಕೆ ಬೆಂಬಲಿಸಲು ಅಷ್ಟೇ ಅಲ್ಲದೆ ಎಲ್ಲಾ ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ನೀಡಲಿದ್ದಾರೆ ಎಂದು ಫಡ್ನವೀಸ್ ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!