ಮಹಾತ್ಮಾ ಗಾಂಧಿ ಮೊಮ್ಮಗ ಕಾನೂ ಗಾಂಧಿ ಇನ್ನಿಲ್ಲ

ಮೊಮ್ಮಗ (87) ಇಂದು ಸೂರತ್ ನ ಖಾಸಗಿ ಅಸ್ಪತ್ರೆಯಲ್ಲಿ ಬೆಳಿಗ್ಗೆ ಸುಮಾರು 8:30 ರಲ್ಲಿ ನಿಧನರಾಗಿದ್ದಾರೆ. ಎರಡು ವಾರಗಳ ಹಿಂದೆ ಅವರು ಅನಾರೋಗ್ಯದ ಕಾರಣ ಅಸ್ಪತ್ರೆಗೆ ದಾಖಲಾಗಿದ್ದರು.

ಮಹಾತ್ಮಗಾಂಧಿಯವರ ಮೂರನೇ ಪುತ್ರ ರಾಮದಾಸ್ ಗಾಂಧಿಯವರ ಪುತ್ರ. ಕೆಲ ಕಾಲದಿಂದ ಪತ್ನಿ ಶಿವಲಕ್ಷ್ಮಿ ಜೊತೆಗೆ ಪಂಜಾಬಿ ಸಮಾಜ ನಡೆಸುತ್ತಿದ್ದ ರಾಧಾಕೃಷ್ಣ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು. ಹೃದಯಾಘಾತದಿಂದಾಗಿ ಅಕ್ಟೋಬರ್22 ರಂದು ಅಸ್ಪತ್ರೆಗೆ ದಾಖಲಾಗಿದ್ದರು. ಅವರು ಪಾರ್ಶ್ವವಾಯುವಿಗೂ ತುತ್ತಾಗಿದ್ದರು.

ದಂಡಿ ಯಾತ್ರೆಯಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಪಾಲ್ಗೊಂಡು ಬದುಕುಳಿದ ಬೆರಳೆಣಿಕೆಯಷ್ಟು ಜನರಲ್ಲಿ ಕಾನೂ ಗಾಂಧಿಯೂ ಒಬ್ಬರು. ರಾಷ್ಟ್ರಪಿತನ ಮೊಮ್ಮಗನಾಗಿ, ನಾಸಾ ವಿಜ್ಞಾನಿಯಾಗಿ ಉತ್ತಮ ಹಿನ್ನೆಲೆಯಿದ್ದರೂ ಕೊನೆ ದಿನಗಳಲ್ಲಿ ಅವರನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ.

Kanu ramdas gandhiರಾಷ್ಟ್ರಪಿತನ ಮೊಮ್ಮಗ ಕಾನೂ ಗಾಂಧಿ, ಮಹಾತ್ಮ ಗಾಂಧಿಯವರ ಆಪ್ತನಾಗಿ ಅವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಅಮೆರಿಕಾ ರಾಯಭಾರಿ ಜಾನ್ ಕೆನ್ನೆತ್ ನೆರವಿನಿಂದ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶ ಲಭಿಸಿತು. ಆ ನಂತರ ನಾಸಾ, ಅಮೆರಿಕಾ ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಮಾಡಿದ್ದರು. ಈ ಸಂದರ್ಭದಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಶಿವಲಕ್ಷ್ಮಿಯವರನ್ನು ಮದುವೆಯಾಗಿದ್ದರು. ಇವರಿಗೆ ಮಕ್ಕಳಿಲ್ಲ. 40 ವರ್ಷ ಅಮೆರಿಕಾದಲ್ಲಿದ್ದ ದಂಪತಿಗಳು 2014 ರಲ್ಲಿ ಭಾರತಕ್ಕೆ ವಾಪಸಾಗಿದ್ದರು.

ಇಲ್ಲಿ ಸ್ವಂತ ಮನೆ ಇಲ್ಲದ ಕಾರಣ ಕೆಲ ಕಾಲ ಆಶ್ರಮಗಳು, ಛತ್ರಗಳಲ್ಲಿ ಕಳೆದರು. ಸಂಪಾದನೆಯನ್ನೆಲ್ಲಾ ದಾನ ಧರ್ಮ ಮಾಡಿ ಕೈ ಖಾಲಿ ಮಾಡಿಕೊಂಡಿದ್ದರು. ಹದಿನೈದು ದಿನಗಳಿಂದ ಸೂರತ್ ನ ರಾಧಾಕೃಷ್ಣ ದೇವಾಲಯದ ನೇತೃತ್ವದಲ್ಲಿ ನಡೆಯುತ್ತಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಅವರ ಚಿಕಿತ್ಸೆಯನ್ನು ಉಚಿತವಾಗಿ ಭರಿಸುತ್ತಲೇ ದಂಪತಿಗಳನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಿತ್ತು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache