ದೊಡ್ಡ ಕಪ್ಪು ಕುಳಗಳ ಹೆಸರು ಬಹಿರಂಗಪಡಿಸುತ್ತೇನೆ

ಕಮೀಷನ್ ಅಸೆಗೆ ಬಿದ್ದು ಜೈಲು ಪಾಲಾಗಿದ್ದಾರೆ ಅಹಮದಾಬಾದ್ ನ ಉದ್ಯಮಿ ಮಹೇಶ್ ಶಾ. ಐಡಿಎಸ್(ಇನ್ಕಮ್ ಡಿಕ್ಲೆರೇಷನ್ ಸ್ಕೀಮ್) ನಡಿ 13,860 ಕೋಟಿ ಘೋಷಿಸಿ ಪರಾರಿಯಾಗಿದ್ದ ಶಾ, ನಾಟಕೀಯ ಬೆಳವಣಿಗೆಗಳ ನಡುವೆ ಅರೆಸ್ಟ್ ಆಗಿದ್ದಾರೆ.

ಆದರೆ ಘೋಷಿಸಿದ್ದ ಹಣವೆಲ್ಲಾ ಶಾ ರವರಿಗೆ ಸೇರಿದ್ದಲ್ಲ, ಕಪ್ಪು ಹಣ ಹೊಂದಿದ ದೊಡ್ಡ ಕುಳಗಳಿಗೆ ಸೇರಿದ್ದು ಎಂದು ಮಹೇಶ್ ಶಾ ಚಾರ್ಟರ್ಡ್ ಅಕೌಂಟೆಂಟ್ ತೇಸ್ ಮೂಲ್ ಸೇತ್ನಾ ಹೇಳಿದ್ದಾರೆ. ಶೀಘ್ರವೇ ಅವರ ಹೆಸರುಗಳನ್ನು ಐಟಿ ಅಧಿಕಾರಿಗಳೆದುರು ಶಾ ಬಹಿರಂಗಪಡಿಸಲಿದ್ದಾರೆ ಎಂದು ಮಹೇಶ್ ಪರ್ಸನಲ್ ಚಾರ್ಟರ್ಡ್ ಅಕೌಂಟೆಂಟ್ ಹೇಳಿದ್ದಾರೆ.

ರೂ. 13,860 ಕೋಟಿ ಹಣವನ್ನು ಇನ್ಕಮ್ ಡಿಕ್ಲೆರೇಷನ್ ಸ್ಕೀಮ್ ಅಡಿಯಲ್ಲಿ ಘೋಷಿಸಿದ್ದ ಶಾ, ಪಾವತಿಸಬೇಕಿದ್ದ ಶೇ.45 ರಷ್ಟು ತೆರಿಗೆಯಲ್ಲಿ ಮೊದಲ ಕಂತಿನ ಹಣವಾಗಿ ರೂ. 1,560 ಕೋಟಿ ಪಾವತಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕಪ್ಪು ಕುಬೇರರು ಕೈಕೊಟ್ಟಿದ್ದರಿಂದ ಅವರ ಪ್ಲಾನ್ ಎಲ್ಲಾ ಉಲ್ಟಾ ಹೊಡೆದಿದೆ. ಈ ವ್ಯವಹಾರದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಸಿಲುಕಿಸಬೇಡಿ ಎಂದು ಶಾ ಮನವಿ ಮಾಡಿದ್ದಾರೆ.