41478748671_625x300

ಈ ನೋಟುಗಳನ್ನು ನಕಲು ಮಾಡುವುದು ಸಾಧ್ಯವೇ ಇಲ್ಲ

ಹಳೆಯ 500, 100 ಮುಖಬೆಲೆಯ ನೋಟು ರದ್ದು ಮಾಡಿ, ಹೊಸದಾಗಿ ರೂ. 500, 2000 ಮುಖಬೆಲೆಯ ನೋಟು ಬಿಡುಗಡೆ ಮಾಡುತ್ತಿರುವುದರ ಹಿಂದಿನ ಉದ್ದೇಶ ಕೆವಲ ಕಪ್ಪು ಹಣವನ್ನು ನಿಯಂತ್ರಿಸುವುದು ಅಷ್ಟೇ ಅಲ್ಲ, ನಕಲಿ ನೋಟು ಇಲ್ಲದಂತೆ ಮಾಡುವುದೂ ಪ್ರಮುಖ ಉದ್ದೇಶಗಳಲ್ಲೊಂದು. ಆದರೆ, ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ನೋಟುಗಳನ್ನೂ ಕೂಡಾ ನಕಲಿ ಮಾಡಬಹುದು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅದರೆ ಇಂತಹ ಸಾಧ್ಯತೆಗಳನ್ನು ಗುಪ್ತಚರ ಸಂಸ್ಥೆಗಳು ನಿರಾಕರಿಸುತ್ತಿವೆ. ಈಗ ಸರ್ಕಾರ ಬಿಡುಗಡೆ ಮಾಡಿದ ನೋಟುಗಳನ್ನು ನಕಲಿ ಮಾಡುವುದು ಕಷ್ಟಸಾಧ್ಯ ಎನ್ನುತ್ತಿದ್ದಾರೆ. ಮುಖ್ಯವಾಗಿ ಪಾಕಿಸ್ತಾನದ ಉಗ್ರ ಸಂಘಟನೆಗಳು, ಬಾಂಗ್ಲಾದೇಶದಲ್ಲಿ ನಕಲಿ ನೋಟು ತಯಾರಿಸುವವರು ಇವುಗಳನ್ನು ನಕಲು ಮಾಡುವುದು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಅತಿ ಹೆಚ್ಚು ಭದ್ರತೆಯಿಂದ ಕೂಡಿದ ಈ ಹೊಸ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದರೂ, ಆ ವಿಷಯ ಕೆಲವೇ ಕೆಲವರಿಗೆ ಮಾತ್ರ ತಿಳಿದಿತ್ತು. ಈ ಹೊಸ ನೋಟುಗಳ ಬಗ್ಗೆ ಈಗ ಹೇಳುತ್ತಿರುವಂತೆ ಮಾತ್ರವಲ್ಲದೇ ಇನ್ನೂ ಹಲವು ಭದ್ರತಾ ವೈಶಿಷ್ಟ್ಯಗಳಿವೆ ಎಂದು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್(ರಾ), ಇಂಟೆಲಿಜೆನ್ಸ್ ಬ್ಯೂರೋ, ಡಿಆರ್‌ರ್ ಮುಂತಾದ ಸಂಸ್ಥೆಗಳು ಹೇಳುತ್ತಿವೆ. ಪಾಕಿಸ್ತಾನದ ಪೇಶಾವರದಲ್ಲಿ ವಿಶೇಷವಾಗಿ ಭಾರತೀಯ ಕರೆನ್ಸಿ ನೋಟು ನಕಲಿ ಮಾಡಲು ಒಂದು ಮುದ್ರಣಾಲಯ ಕೂಡಾ ಇದೆ ಗುಪ್ತಚರ ಸಂಸ್ಥೆಗಳು ಈ ಹಿಂದೆಯೇ ಸರ್ಕಾರಕ್ಕೆ, ಆರ್‌ಬಿಐ ಗೆ ಹೇಳಿದ್ದವು.

ಈ ಪ್ರೆಸ್ ಪಾಕ್ ನ ಐಎಸ್ಐ ನೇತೃತ್ವದಲ್ಲಿ ನಡೆಯುತ್ತದೆ. ಇಲ್ಲಿ ಪ್ರಿಂಟ್ ಆದ ನಕಲಿ ನೋಟುಗಳನ್ನು ದಾವೂದ್ ಇಬ್ರಾಹಿಂಗೆ ಸೇರಿದ ‘ಡಿ’ ಕಂಪನಿ, ಲಷ್ಕರೆ ತಯ್ಬಾ, ಇತರ ಅಂತರಾಷ್ಟ್ರೀಯ ಅಪರಾಧಿ ಸಂಘಟನೆಗಳು ಭಾರತದೊಳಗೆ ತಲುಪಿಸುತ್ತವೆ. ತಾವು ಭಾರತೀಯ ಕರೆನ್ಸಿಯನ್ನು ಪ್ರಿಂಟ್ ಮಾಡಿದ್ದೇವೆ ಎಂದು ಪಾಕಿಸ್ತಾನದವರು ಕೂಡಾ ಕಳೆದ ವರ್ಷ ಒಮ್ಮೆ ಹೇಳಿದ್ದರು. ಪ್ರತಿವರ್ಷ ಸುಮಾರು ರೂ. 70 ಕೋಟಿ ಮೌಲ್ಯದ ನಕಲಿ ನೋಟು ಭಾರತಕ್ಕೆ ಬರುತ್ತಿತ್ತು.

ಆದರೆ ಹೊಸ ನೋಟುಗಳಲ್ಲಿರುವ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಮಾಡಲು ಪಾಕ್ ಬಳಿ ಇರುವ ತಂತ್ರಜ್ಞಾನ ಸಾಕಾಗುವುದಿಲ್ಲ, ಅಸಲಿಗೆ ಅದನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ ಎಂದು ಗುಪ್ತಚರ ಸಂಸ್ಥೆಗಳು ಸ್ಪಷ್ಟಪಡಿಸಿವೆ. ಪಾಕಿಸ್ತಾನ ತನ್ನ ನಕಲಿ ನೋಟುಗಳ ಪ್ರೆಸ್ ಗೆ ಇನ್ನು ಬಾಗಿಲು ಹಾಕುವುದೊಂದೇ ದಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅಭಿಪ್ರಾಯಪಟ್ಟರು. ಮತ್ತೊಂದು ಕಡೆ ಹಳೆಯ ನೋಟು ರದ್ದುಗೊಳಿಸಿ ಸರ್ಕಾರ ಕೈಗೊಂಡ ತೀರ್ಮಾನವನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ.

Related Post

error: Content is protected !!