ಕಡಲೂರು ಆಲಯದಲ್ಲಿ ನೆಲಮಾಳಿಗೆ, ತಪೋ ಭಂಗಿಯಲ್ಲಿದ್ದ ಅಸ್ಥಿಪಂಜರಗಳು ಪತ್ತೆ

ತಮಿಳುನಾಡಿನಲ್ಲಿ ಜಿಲ್ಲೆಯಲ್ಲಿ ಪುರಾತನ ದೇವಾಲಯವೊಂದರಲ್ಲಿ ವಿಶಾಲವಾದ ಪತ್ತೆಯಾಗಿದೆ. ಅದರಲ್ಲಿ ತಪಸ್ಸಿನ ಭಂಗಿಯಲ್ಲಿದ್ದ ಮೂರು ಅಸ್ಥಿಪಂಜರಗಳೂ ಪತ್ತೆಯಾಗಿವೆ.

ಸಮೀಪದ ಸಿಎನ್ ಪಾಳೆಯಂ ಗ್ರಾಮದಲ್ಲಿ ಪುರಾತನ ಪುಷ್ಪಗಿರಿ ಮಲೈಯಾಂಡವರ್ ಆಲಯವಿದೆ. ಈ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿಗೆ ಭಾನುವಾರ ಒಂದು ಕಡೆ ಭೂಮಿಯೊಳಗೆ ಹೋಗುವಂತಹ ದಾರಿಯೊಂದು ಕಾಣಿಸಿಕೊಂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಅಡ್ಡಿಯಾದ ಕಲ್ಲು ಮಣ್ಣು ಸರಿಸಿ ನೋಡಿದಾಗ ದೇವಾಲಯದಲ್ಲಿನ ಭೂಗರ್ಭ ಮಾರ್ಗ ಬಯಲಿಗೆ ಬಂದಿದೆ.

ಈ ಸುದ್ದಿ ಹಬ್ಬುತ್ತಿದ್ದಂತೆ ದೇವಾಲಯಕ್ಕೆ ಆಗಮಿಸಿದ ಭಕ್ತರು, ನಿವಾಸಿಗಳು, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಮುಖ್ಯಸ್ಥರು ಆ ಭೂಗರ್ಭ ಮಾರ್ಗದ ಮೂಲಕ ಒಳ ಹೊಕ್ಕರು. ಆಗ ಅವರಿಗೆ ದರ್ಶನ ನೀಡಿದ್ದು ವಿಶಾಲವಾದ .

ಅ ನೆಲಮಾಳಿಗೆಯಲ್ಲಿ ತಪಸ್ಸಿನ ಭಂಗಿಯಲ್ಲಿದ್ದ ಮೂರು ಪತ್ತೆಯಾಗಿದ್ದು, ಯಾರೋ ಸಾಧಕರು ಅಲ್ಲಿ ಜೀವಸಮಾಧಿ ಆಗಿದ್ದರೆಂದು ಎಲ್ಲಾ ಭಾವಿಸುತ್ತಿದ್ದಾರೆ. ನಂತರ ಭಕ್ತರ, ಸ್ಥಳೀಯರಿಗೆ ನೆಲಮಾಳಿಗೆ ಪ್ರವೇಶದಿಂದ ನಿರ್ಬಂಧಿಸಿದರು.

ದೇವಾಲಯದ ಮೂಲಗಳ ಪ್ರಕಾರ, ಪುರಾತತ್ವ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಅಲ್ಲಿಗೆ ಆಗಮಿಸಿ ನೆಲಮಾಳಿಗೆಯನ್ನು ಪರಿಶೀಲಿಸಿದರು. ಈ ನೆಲಮಾಳಿಗೆಯನ್ನು ಸುಮಾರು 400, 500 ವರ್ಷಗಳ ಹಿಂದೆ ನಿರ್ಮಿಸಿರಬಹುದು ಮತ್ತು ತಪೋ ಭಂಗಿಯಲ್ಲಿರುವ ಸಾಧಕರ ಸುಮಾರು 100 ವರ್ಷಗಳ ಹಿಂದಿನದ್ದು ಇರಬಹುದು ಎನ್ನಲಾಗಿದೆ.

ಇಲ್ಲಿ ಪತ್ತೆಯಾದ ಆಧಾರಗಳು ಅಳಿಸಿಹೋಗದಂತೆ ನೆಲಮಾಳಿಗೆ ಪ್ರವೇಶವನ್ನು ನಿರ್ಬಂಧಿಸಿದ ಅಧಿಕಾರಿಗಳು ಇಲ್ಲಿನ ದೇವಾಲಯ, ಇಲ್ಲಿ ಜೀವಿಸಿದ್ದ ಸಾಧಕರು, ನೆಲಮಾಳಿಗೆಗೆ ಸಂಬಂಧಿಸಿದ ಆಧಾರಗಳು ಲಭಿಸುತ್ತವೆಯೇನೋ ಎಂದು ಶಾಸನಗಳು, ತಾಳೆಗರಿಗಳು, ಗ್ರಂಥಗಳನ್ನು ಪರಿಶೀಲಿಸುತ್ತಿದ್ದಾರೆ.

ಸಿ.ಎನ್.ಪಾಳೆಯಂ ಸಮೀಪದ
ತಿರುವದಿಗೈ ಗ್ರಾಮದಲ್ಲಿ ಹಲವು ಸಾಧಕರು, ಮುನಿಗಳು ನೆಲೆಸಿದ್ದ ಹಿನ್ನೆಲೆಯಲ್ಲಿ ಸದ್ಯ ಬೆಳಕಿಗೆ ಬಂದಿರುವ ನೆಲಮಾಳಿಗೆಯ ಕುರಿತು ವಿಸ್ತಾರವಾದ ಸಂಶೋಧನೆ ನಡೆಸಿದರೆ ಈ ಸ್ಥಳದ ವೈಶಿಷ್ಟ್ಯತೆ ಬಗ್ಗೆ ಮತ್ತಷ್ಟು ವಿಷಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

loading...
error: Content is protected !!