ಮಲಯಾಳಂ ನಟಿ ಭಾವನಾ ಕಿಡ್ನಾಪ್, ಚಲಿಸುತ್ತಿದ್ದ ಕಾರಿನಲ್ಲಿ ಲೈಂಗಿಕ ಕಿರುಕುಳ

ಮುಂಬೈ: ತಮ್ಮನ್ನು ಕಿಡ್ನಾಪ್ ಮಾಡಿದರು ಎಂದು ಚಿತ್ರನಟಿ ಭಾವನಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಎರ್ನಾಕುಲಂ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಮನೆಗೆ ವಾಪಸಾಗುತ್ತಿರುವ ವೇಳೆ ಕೆಲ ದುಷ್ಕರ್ಮಿಗಳು ಆಕೆಯ ಕಾರನ್ನು ತಡೆದು ಅದರೊಳಗೆ ನುಗ್ಗಿ ಕಾರನ್ನು ಬೇರೆ ದಾರಿಗೆ ತಿರುಗಿಸಿದರು. ಸುಮಾರು 25 ಕಿ.ಮೀ ವರೆಗೂ ಚಲಿಸುತ್ತಿದ್ದ ಕಾರಿನಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದರು. ನಂತರ ಪಲವರಿವತ್ತಮ್ ಪ್ರದೇಶದಲ್ಲಿ ಕಾರು ನಿಲ್ಲಿಸಿ ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಪರಾರಿಯಾದರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಂತರ ಭಾವನಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳಲ್ಲಿ ಒಬ್ಬರು ತನ್ನ ಬಳಿ ಕೆಲಸ ಮಾಡಿದ ಕಾರು ಚಾಲಕ ಮಾರ್ಟಿನ್ ಕೂಡಾ ಒಬ್ಬರು ಎಂದು ಭಾವನಾ ಹೇಳಿದ್ದಾರೆ. ಆಕೆಯ ಬಳಿ ಕೆಲಸ ಮಾಡಿದ ಮತ್ತೊಬ್ಬ ವ್ಯಕ್ತಿ ಸುನಿಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಮಾರ್ಟಿನಲ್ಲಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ತನ್ನ ಫೋಟೋಗಳು ತೆಗೆದು, ವೀಡಿಯೋ ಮಾಡಿದ್ದಾರೆಂದು ಭಾವನಾ ಪೊಲೀಸರಿಗೆ ಹೇಳಿದ್ದರಿಂದ ಪೊಲೀಸರು ಅಪಹರಣ, ಕಿರುಕುಳ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಚಿತ್ರನಟಿ ಭಾವನಾ ಮಲಯಾಳಂ ಮತ್ತು ಕೆಲ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.