ಮಲಯಾಳಂ ಚಿತ್ರ ನಿರ್ದೇಶಕ ಐ.ವಿ.ಶಶಿ ಮರಳಿ ಬಾರದ ಲೋಕಕ್ಕೆ – News Mirchi

ಮಲಯಾಳಂ ಚಿತ್ರ ನಿರ್ದೇಶಕ ಐ.ವಿ.ಶಶಿ ಮರಳಿ ಬಾರದ ಲೋಕಕ್ಕೆ

ನವದೆಹಲಿ: ಮಲಯಾಳಂ ಚಿತ್ರರಂಗದ ಚಿತ್ರ ನಿರ್ದೇಶನದಲ್ಲಿ ತನ್ನದೇ ಛಾಪು ಮೂಡಿಸಿದ್ದ ನಿರ್ದೇಶಕ ಐ.ವಿ.ಶಶಿ ಮರಳಿಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

30ವರ್ಷಗಳ ಕಾಲ ಮಲಯಾಳಂ ಸಿನಿರಂಗವನ್ನಾಳಿದ ಅವರು ಸಾಲಿಗ್ರಾಮಂನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ. ಶಶಿ ನಿರ್ದೇಶನದ ‘ಆರುಧಮ್’ ಅತ್ಯುತ್ತಮ ಸಿನಿಮಾ ಎಂದು ಗುರುತಿಸಿಕೊಂಡಿತ್ತಲ್ಲದೇ 1982ರಲ್ಲಿ ನರ್ಗಿಸ್ ದತ್ ಪ್ರಶಸ್ತಿಯನ್ನು ಪಡೆದಿತ್ತು. 2015ರಲ್ಲಿ ಡ್ಯಾನಿಯಲ್ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದ್ದರು. ಹಲವು ರಾಜ್ಯ ಪ್ರಶಸ್ತಿಗಳಿಗೂ ಭಾಜನರಾಗಿದ್ದರು.

ಕಲಿಯಲ್ಲ ಕಲ್ಯಾಣಂ ಸಿನಿಮಾ ಮೂಲಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಅವರು ‘ಅವಳುಡೆ ರಾವುಕಲ್, ದೇವಸುರಂ, ಉಲ್ಸಾವಂ, ಗುರು, ಅಂಗಾಡಿ, ಇನ್ಸಪೆಕ್ಟರ್ ಬಲರಾಂ, ಶ್ರದ್ಧಾ ಸೇರಿದಂತೆ 150ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಹಿಂದಿ ಭಾಷೆಯಲ್ಲೂ ಸಿನಿಮಾ ನಿರ್ದೇಶಿಸಿದ್ದರು. ಶಶಿ ಪತ್ನಿ,ಪುತ್ರ, ಪುತ್ರಿಯನ್ನು ಅಪಾರ ಬಂಧುಗಳನ್ನು ಅಗಲಿದ್ದಾರೆ. ಶಶಿ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.

Loading...