ಮತಾಂತರವಾಗು, ಇಲ್ಲದಿದ್ದರೆ ಕೈಕಾಲು ಕತ್ತರಿಸುತ್ತೇವೆ: ಮಲಯಾಳಿ ಲೇಖಕನಿಗೆ ಬೆದರಿಕೆ – News Mirchi

ಮತಾಂತರವಾಗು, ಇಲ್ಲದಿದ್ದರೆ ಕೈಕಾಲು ಕತ್ತರಿಸುತ್ತೇವೆ: ಮಲಯಾಳಿ ಲೇಖಕನಿಗೆ ಬೆದರಿಕೆ

ತಿರುವನಂತಪುರಂ: ಮತಾಂತರವಾಗು, ಇಲ್ಲವೆಂದರೆ ಆರು ತಿಂಗಳಲ್ಲಿ ಕೈಕತ್ತರಿಸುತ್ತೇವೆ ಎಂದು ಪ್ರಸಿದ್ಧ ಮಲಯಾಳಿ ಲೇಖಕ ಕೆ.ಪಿ.ರಾಮನುಣ್ಣಿಗೆ ಬೆದರಿಕೆ ಪತ್ರ ಬಂದಿದೆ. ಆರು ತಿಂಗಳೊಳಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗದಿದ್ದರೆ ಬಲಗೈ, ಎಡಗಾಲು ಕತ್ತರಿಸುತ್ತೇವೆ ಎಂದು ಅಪರಿಚಿತ ವ್ಯಕ್ತಿಗಳು ಬೆದರಿಕೆ ಪತ್ರ ಕಳುಹಿಸಿದ್ದಾರೆ.

ಕೋಜಿಕ್ಕೋಡ್ ನಲ್ಲಿನ ಅವರ ನಿವಾಸಕ್ಕೆ ಆರು ದಿನಗಳ ಹಿಂದೆ ಈ ಪತ್ರ ಬಂದಿದೆ ಎನ್ನಲಾಗಿದ್ದು, ಅವರು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಈ ಪತ್ರದ ಕುರಿತು ತನಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ. ಪತ್ರದ ಮೇಲಿನ ವಿಳಾಸ ಮಳಪ್ಪುರಂ ಜಿಲ್ಲೆಯ ಮಂಜೇರಿಯಿಂದ ಬಂದಿದ್ದಾಗಿ ತಿಳಿದುಬಂದಿದೆ.

ಬೆದರಿಕೆ ಪತ್ರದ ಹಿಂದೆ ಯಾರ ಕೈವಾಡವೆಂಬುದು ತನಗೆ ತಿಳಿದಿಲ್ಲ. ನಾನು ಕೋಜಿಕ್ಕೋಡ್ ನಲ್ಲಿ ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದೇನೆ. ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ ಎಂದು ಲೇಖಕ ಹೇಳಿದರು.

ಮೊದಲು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸದ ಲೇಖಕ, ನಂತರ ಹಿತೈಷಿಗಳ ಸಲಹೆಯಿಂದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುವಂತಹ ಬರಹಗಳನ್ನು ರಾಮನುಣ್ಣಿ ಬರೆಯುತ್ತಿದ್ದು, ಕೂಡಲೇ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು, ತಪ್ಪಿದಲ್ಲಿ ಕೈಕಾಲು ಕತ್ತರಿಸುತ್ತೇವೆ ಎಂದು ಪತ್ರದಲ್ಲಿದೆ.

Click for More Interesting News

Loading...
error: Content is protected !!