ದೀದೀ ಹತ್ಯೆಗೆ ಸಂಚು ನಡೆದಿದೆ: ಖರ್ಗೆ – News Mirchi

ದೀದೀ ಹತ್ಯೆಗೆ ಸಂಚು ನಡೆದಿದೆ: ಖರ್ಗೆ

ಗರಿಷ್ಠ ಮುಖಬೆಲೆಯ ನೋಟು ರದ್ದು ತೀರ್ಮಾನವನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇಶಾದ್ಯಂತ ಹಲವು ಕಡೆ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ‌. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲ್ಲಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ಕಾಲ ಆಗಸದಲ್ಲಿ ಹಾರಾಡಿತು, ಆ ಸಮಯದಲ್ಲಿ ಇಂಧನ ಖಾಲಿಯಾಗುತ್ತಿದೆ ಎಂದು ಪೈಲಟ್ ಹೇಳಿದರೂ ಎಟಿಸಿ ಯಿಂದ ಕೆಳಗಿಳಿಯಲು ಅನುಮತಿ ಬರಲಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.

ಈ ವಿಷಯದ ಕುರಿತು ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಧ್ವನಿಯೆತ್ತಿದರು. ತಮ್ಮ ನಾಯಕಿಯನ್ನು ಹತ್ಯೆ ಮಾಡಲು ಸಂಚು ನಡೆದಿದೆ. ತನಿಖೆ ನಡೆಸಿದರೆ ಎಲ್ಲಾ ವಿಷಯ ಹೊರಬರುತ್ತದೆ ಎಂದು ಅವರು ಒತ್ತಾಯ ಮಾಡಿದ್ದಾರೆ.

Loading...

Leave a Reply

Your email address will not be published.