Big Breaking News

ಬೆನ್ನಿಗೆ ಚೂರಿ ಹಾಕಿದ ಮುಖ್ಯಮಂತ್ರಿ

ಪಾಟ್ನಾ: ಬಿಹಾರದ ನೆಲದ ಮೇಲೆ ಬಿಹಾರ ಮುಖ್ಯಮಂತ್ರಿಯ ಹೆಸರು ಪ್ರಸ್ತಾಪಿಸದೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದರು. ನೋಟು ರದ್ದು ವಿರೋಧಿಸಿ ನಡೆಸಿದ ರೋಡ್ ಶೋ ನಲ್ಲಿ ನಿತೀಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿನ್ನಿಗೆ ಚೂರಿ ಹಾಕುವವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ನೋಟು ರದ್ದು ಕ್ರಮಕ್ಕೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ ನಿತೀಶ್ ಕುಮಾರ್ ರವರ ಮೇಲಿನ ಅಸಮಾಧಾನವನ್ನು ಮಮತಾ ಹೊರಹಾಕಿದ್ದು ಹೀಗೆ.

Download Free

ಈ ಹಿಂದೆ ಎಲ್ಲಾ ವಿಷಯಗಳಲ್ಲಿ ಕೇಂದ್ರದ ವಿರುದ್ಧ ಹೋರಾಡಿದಾಗ ಜೊತೆಗಿದ್ದ ನಿತೀಶ್ ಕುಮಾರ್ ಈಗ ಕೇಂದ್ರದ ಕ್ರಮಕ್ಕೆ ಬೆಂಬಲ ನೀಡಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.

ಬಿಹಾರ ಪ್ರವಾಸಕ್ಕೆ ಆಗಮಿಸಿದ ತಮ್ಮನ್ನು ಸ್ವಾಗತಿಸಲು ಬಿಹಾರ ಮುಖ್ಯಮಂತ್ರಿ ಕನಿಷ್ಠ ಒಬ್ಬ ಹಿರಿಯ ಸಚಿವರನ್ನೂ ಕಳುಹಿಸಲಿಲ್ಲ ಎಂದು ಆರೋಪಿಸಿದರು. ಆದರೆ ಲಾಲೂ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿದ ಮಮತಾ, ಲಾಲೂ ಪತ್ನಿ ರಾಬ್ಡೀ ದೇವಿಯನ್ನು ಅಪ್ಪಿಕೊಂಡು ಫೋಟೋಗೆ ಫೋಸ್ ನೀಡಿದರು. ಆದರೆ ಬಿಹಾರ ಸಚಿವ ಸಂಪುಟದಲ್ಲಿರುವ ಲಾಲೂ ಪುತ್ರರು ಕೂಡಾ ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲಿಲ್ಲ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache