ಸೇಡಿನ ರಾಜಕಾರಣಕ್ಕೆ ಮುಂದಾದ ಮಮತಾ |News Mirchi

ಸೇಡಿನ ರಾಜಕಾರಣಕ್ಕೆ ಮುಂದಾದ ಮಮತಾ

ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖಂಡ ಸುದೀಪ್ ಬಂಡೋಪಾದ್ಯಾಯ ಅವರನ್ನು ಸಿಬಿಐ ಬಂಧಿಸಿದ ನಂತರ ತಾಳ್ಮೆ ಕಳೆದುಕೊಂಡಿರುವ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸ್ ಮತ್ತು ಸಿಐಡಿ ಗೆ ಸೂಚಿಸಿರುವುದಾಗಿ ಮಮತಾ ಹೇಳಿದ್ದಾರೆ.

  • No items.

ಬಿಜೆಪಿ ನಾಯಕರ ವಿರುದ್ಧ ಟಿಎಂಸಿ ಮಾಡಿರುವ ಆರೋಪಗಳ ಕಡೆ ಗಮನಹರಿಸಿ, ನೋಟು ರದ್ದಾಗುವ ಮುನ್ನ ಬಿಜೆಪಿ ನಾಯಕರು ಖರೀದಿಸಿದ ಆಸ್ತಿಗಳ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಮಮತಾ ಬ್ಯಾನರ್ಜಿ ಅಪ್ತನಾಗಿರುವ ಬಂಡೋಪಾದ್ಯಾಯ ಚಿಟ್ ಫಂಡ್ ಹಗರಣದ ಪ್ರಮುಖ ರೂವಾರಿ ಎನ್ನಲಾಗುತ್ತಿದೆ. ಟಿಎಂಸಿ ಮುಖಂಡರ ಬಂಧನ ಹಿನ್ನೆಲೆಯಲ್ಲಿ ಮಾತನಾಡಿರುವ ಆಕೆ ‘ಬಿಜೆಪಿಗೆ ಸಿಬಿಐ ಇದ್ದರೆ, ನಮಗೂ ಸರ್ಕಾರ ಮತ್ತು ಪೊಲೀಸ್ ಇದೆ’ ಎಂದು ಹೇಳಿದ್ದಾರೆ.

Loading...
loading...
error: Content is protected !!