ಜಿಎಸ್ಟಿ ಸ್ವಾರ್ಥದ ಟ್ಯಾಕ್ಸ್ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ – News Mirchi

ಜಿಎಸ್ಟಿ ಸ್ವಾರ್ಥದ ಟ್ಯಾಕ್ಸ್ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ

ಜನರಿಗೆ ಕಿರುಕುಳ ನೀಡಲು ಮತ್ತು ದೇಶದ ಆರ್ಥಿಕತೆಯನ್ನು ಮುಗಿಸಲೆಂದೇ ನರೇಂದ್ರ ಮೋದಿ ಸರ್ಕಾರ ಸರಕು ಸೇವಾ ತೆರಿಗೆ(ಜಿಎಸ್ಟಿ) ಯನ್ನು ಜಾರಿಗೆ ತಂದಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ನೋಟು ರದ್ದು ಕ್ರಮವು ವಿಫಲವಾಗಿದ್ದು, ಸಾಮಾಜಿಕ ತಾಣಗಳ ಬಳಕೆದಾರರು ತಮ್ಮ ಪ್ರೊಫೈಲ್ ಪಿಕ್ಚರ್ ಅನ್ನು ನವೆಂಬರ್ 8 ರಂದು ಕಪ್ಪು ಬಣ್ಣದ ಚಿತ್ರವಾಗಿಸಿಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಜಿಗುಪ್ಸೆಯಲ್ಲಿಯೂ ಸಂತೋಷದ ಬೆಳಕು ಹರಿಸುವ ‘ಈ ನಾನು ಆ ನೀನು’

ಜಿಎಸ್ಟಿಯನ್ನು ಗ್ರೇಟ್ ಸೆಲ್ಫಿಶ್ ಟ್ಯಾಕ್ಸ್(ಸ್ವಾರ್ಥದ ತೆರಿಗೆ) ಎಂದು ಜರಿದ ಮಮತಾ, ವ್ಯಾಪಾರಕ್ಕೆ ಹಾನಿ ಮಾಡಲು, ಉದ್ಯೋಗಗಳನ್ನು ಕಸಿಯಲು ಮತ್ತು ದೇಶದ ಆರ್ಥಿಕತೆಯನ್ನು ಮುಗಿಸುವುದಕ್ಕಾಗಿ ಜಿಎಸ್ಟಿ ಬಂದಿದೆ ಎಂದು ಆಕೆ ಟ್ವೀಟ್ ಮಾಡಿದ್ದಾರೆ. ನೋಟು ರದ್ದು ಕ್ರಮ ಘೋಷಣೆಯಾದ ನವೆಂಬರ್ 8 ರಂದು ಬ್ಲಾಕ್ ಡೇ ಆಗಿ ಆಚರಿಸುವುದಾಗಿ ಈ ಹಿಂದೆಯೇ ತೃಣಮೂಲ ಕಾಂಗ್ರೆಸ್ ಘೋಷಿಸಿತ್ತು.

Get Latest updates on WhatsApp. Send ‘Add Me’ to 8550851559

Loading...