ನೋಟು ರದ್ದು ಹಿಂಪಡೆಯದಿದ್ದರೆ, ಮೋದಿಯನ್ನು ಕೆಳಗಿಳಿಸುತ್ತೇವೆ – News Mirchi

ನೋಟು ರದ್ದು ಹಿಂಪಡೆಯದಿದ್ದರೆ, ಮೋದಿಯನ್ನು ಕೆಳಗಿಳಿಸುತ್ತೇವೆ

ನೋಟು ರದ್ದು ತೀರ್ಮಾನವನ್ನು ಹಿಂಪಡೆಯದಿದ್ದರೆ ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪ್ರಜೆಗಳ ನೋಟು ಸಂಕಷ್ಟಗಳನ್ನು ಬಗೆಹರಿಸದಿದ್ದರೆ ಪ್ರಧಾನಿ ನಿವಾಸದ ಎದುರು ಧರಣಿ ಕೂರುತ್ತೇವೆ ಎಂದು ಎಚ್ಚರಿಸಿದರು. ಕೋಲ್ಕತಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ‌್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.

ದೇಶ ಸಂಕಷ್ಟದಲ್ಲಿದೆ. ಬ್ಯಾಂಕುಗಳು ಮತ್ತು ಎಟಿಎಂಗಳಲ್ಲಿ ಹಣವಿಲ್ಲ. ನೋಟು ಸಂಕಷ್ಟದಿಂದ 80 ಜನ ಸಾವನ್ನಪ್ಪಿದ್ದಾರೆ. ಇದ್ಯಾವುದರ ಕಡೆಗೂ ಗಮನ ಹರಿಸದೆ ಪ್ರಧಾನಿ ಮೋದಿ ನಿದ್ದೆ ಮಾಡುತ್ತಿದ್ದಾರೆ. ನಗದು ರಹಿತ ದೇಶವಾಗಿ ಬದಲಾಗಬೇಕೆಂದು ಬೋಧಿಸುತ್ತಿದ್ದಾರೆ, ಗ್ರಾಮೀಣ ಜನರಲ್ಲಿ ಹಲವರಿಗೆ ಬ್ಯಾಂಕ್ ಖಾತೆಗಳಿಲ್ಲ. ಇಂತಹವರು ಸದ್ಯದ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತಾರೆ? ನೋಟು ರದ್ದುಗೊಂಡಿದ್ದರಿಂದ ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ನೆಲೆಸಿದೆ ಎಂದು ಹೇಳಿದರು.

ಜನವಿರೋಧಿ ನಿರ್ಧಾರವನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ತನ್ನ ವಿರುದ್ಧ ಮಾತನಾಡುವವರ ಮೇಲೆ ಇಡಿ, ಸಿಬಿಐ, ಐಟಿ ಇಲಾಖೆಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಮತ್ತೆ ದೆಹಲಿಗೆ ಹೋಗುತ್ತೇನೆ, ಅವಶ್ಯಕತೆ ಬಿದ್ದರೆ ಪ್ರಧಾನಿ ನಿವಾಸದೆದುರು ಧರಣಿ ಕೂರುತ್ತೇನೆ ಎಂದು ಮಮತಾ ಎಚ್ಚರಿಸಿದರು.

Loading...

Leave a Reply

Your email address will not be published.