ಐಟಿ ದಾಳಿಗಳ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಬಳಕೆಗೆ ಮಮತಾ ಗರಂ |News Mirchi

ಐಟಿ ದಾಳಿಗಳ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಬಳಕೆಗೆ ಮಮತಾ ಗರಂ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಆದಾಯ ತೆರಿಗೆ ದಾಳಿಗಳ ವೇಳೆ ಅಧಿಕಾರಿಗಳ ರಕ್ಷಣೆಗೆ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿರುವುದನ್ನು ಪ.ಬಂಗಾಳ ಮುಖ್ಯಮಂತ್ರಿ ತೀವ್ರವಾಗಿ ವಿರೋಧಿಸಿದ್ದಾರೆ.

ಯಾವುದೇ ಕೇಂದ್ರ ಪಡೆಗಳನ್ನು ಆಯಾ ರಾಜ್ಯಗಳ ಕೋರಿಕೆಯ ಮೇರೆಗೆ ಮಾತ್ರ ನಿಯೋಜಿಸಬೇಕು. ಕೇಂದ್ರದ ಈ ಕ್ರಮ ಕಾನೂನು ಬಾಹಿರ ಮತ್ತು ಅಸಂವಿಧಾನಿಕ, ಕೂಡಲೇ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಮಮತಾ ಒತ್ತಾಯಿಸಿದ್ದಾರೆ.

ಆದಾಯ ತೆರಿಗೆ (ಐಟಿ) ಇಲಾಖೆ ಮಾತ್ರ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕಾನೂನಿನ ಪ್ರಕಾರವೇ ನಿಯೋಜಿಸಲಾಗಿದೆ. ತೆರಿಗೆ ದಾಳಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದ ಕಾರಣ ಕೇಂದ್ರ ಪಡೆಗಳ ನೆರವು ಪಡೆಯುತ್ತಿದ್ದೇವೆ ಎಂದು ಹೇಳಿದೆ.

Loading...
loading...
error: Content is protected !!