ಮೊಹರಂ ಕಾರಣದಿಂದಾಗಿ ಅಂದು ದುರ್ಗಾ ಮಾತೆ ವಿಗ್ರಹ ನಿಮಜ್ಜನಕ್ಕೆ ಅನುಮತಿ ಇಲ್ಲ |News Mirchi

ಮೊಹರಂ ಕಾರಣದಿಂದಾಗಿ ಅಂದು ದುರ್ಗಾ ಮಾತೆ ವಿಗ್ರಹ ನಿಮಜ್ಜನಕ್ಕೆ ಅನುಮತಿ ಇಲ್ಲ

ಹಿಂದೂಗಳ ವೈಭವಯುತವಾಗಿ ಆಚರಿಸುವ ದುರ್ಗಾ ಮಾತೆ ವಿಗ್ರಹ ವಿಸರ್ಜನೆ ಮತ್ತು ಮುಸ್ಲಿಮರು ಭಕ್ತಿಯಿಂದಾಚರಿಸುವ ಮೊಹರಂ ಒಂದೇ ದಿನ ಬಂದಿರುವುದು ಪಶ್ಚಿಮ ಬಂಗಾಳದಲ್ಲಿ ಸಮಸ್ಯೆಗೆ ಕಾರಣವಾಗಿದೆ. ಈ ಎರಡೂ ಆಚರಣೆಗಳು ಒಂದೇ ದಿನ ಬಂದಿರುವುದರಿಂದ, ಅಂದು ದುರ್ಗಾ ಮಾತೆ ವಿಗ್ರಹ ವಿಸರ್ಜನೆಗೆ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.

ಬುಧವಾರ ದುರ್ಗಾ ಪೂಜೆ ಸಂಘಟಕರು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರ ಸಭೆ ನಡೆಸಿದ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಎರಡೂ ಆಚರಣೆಗಳೂ ಒಂದೇ ದಿನ ಬಂದಿರುವುದರಿಂದ ಧಾರ್ಮಿಕ ಸಾಮರಸ್ಯತೆಯನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ದುರ್ಗಾ ಮಾತೆ ವಿಗ್ರಹಗಳ ವಿಸರ್ಜನೆ ಸೆಪ್ಟೆಂಬರ್ 30 ರಂದು ಆರಂಭವಾಗಲಿದೆ. ಆದರೆ ಮೊಹರಂ ಇರುವುದರಿಂದ ಅಕ್ಟೋಬರ್ 1 ರಂದು ದುರ್ಗಾಮಾತೆ ನಿಮಜ್ಜನಕ್ಕೆ ಅನುಮತಿ ನೀಡುವುದಿಲ್ಲ, ಅಕ್ಟೋಬರ್ 2 ರಿಂದ 4 ರವರೆಗೆ ವಿಸರ್ಜನೆ ಕಾರ್ಯ ಎಂದಿನಂತೆ ನಡೆಯುತ್ತದೆ ಎಂದು ಆಕೆ ಈ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೊಹರಂ ಆಚರಣೆ

ಧಾರ್ಮಿಕ ಉದ್ವಿಘ್ನತೆ, ಘರ್ಷಣೆಗಳಿಗೆ ಅವಕಾಶ ನೀಡಬಾರದೆಂದೇ ಅಕ್ಟೋಬರ್ 1 ರಂದು ದುರ್ಗಾ ಮಾತೆ ವಿಗ್ರಹಗಳ ನಿಮಜ್ಜನಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆಕೆ ಹೇಳಿದ್ದಾರೆ. ವಿಗ್ರಹಗಳ ವಿಸರ್ಜನೆಗೂ ಮುನ್ನಾ ನಡೆಸುವ ಮೆರವಣಿಗೆ ಮತ್ತು ಮೊಹರಂ ಮೆರವಣಿಗೆ ಎದುರುಬದುರಾದರೆ ಅಹಿತಕರ ಘಟನೆಗಳು ನಡೆಯಬಹುದು ಎಂಬ ಉದ್ದೇಶದಿಂದಲೇ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ದುರ್ಗಾ ಮೆರವಣಿಗೆ

ಆದರೆ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜಕೀಯ ಲಾಭಕ್ಕಾಗಿ ಹಿಂದೂ ಮುಸ್ಲಿಮರನ್ನು ಬೇರೆ ಮಾಡಲೆಂದೇ ಮಮತಾ ಬ್ಯಾನರ್ಜಿ ಇಂತಹ ಆದೇಶ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮುಸ್ಲಿಮರನ್ನು ಓಲೈಸಲು ಮಮತಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕಿಡಿ ಕಾರಿದೆ.

[ಇದನ್ನೂ ಓದಿ: ಕೇರಳ: ನಡುರಸ್ತೆಯಲ್ಲಿಯೇ ಮತ್ತೊಬ್ಬ ಆರ್.ಎಸ್.ಎಸ್ ಕಾರ್ಯಕರ್ತನ ಹತ್ಯೆ]

Loading...
loading...
error: Content is protected !!