ಮುಂದಿನ ಪ್ರಧಾನಿ ದೀದೀ ಅಂತೆ!

ಮೋದಿ ನಂತರ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಪಶ್ಚಿಮ ಬಂಗಾಳದಿಂದ ಉತ್ತರ ಬಂದಿದೆ. ಮುಂದಿನ ಪ್ರಧಾನಿಯಾಗುವ ಅರ್ಹತೆ ಒಬ್ಬ ದೀದೀ(ಮಮತಾ ಬ್ಯಾನರ್ಜಿ)ಗೆ ಮಾತ್ರವಿದೆ ಎಂದು ಲೆಕ್ಕಾಚಾರ ಮಾಡಿ ಹೇಳಿಬಿಟ್ಟಿದ್ದಾರೆ ಇಲ್ಲೊಬ್ಬರು.

ಸದ್ಯ ದೊಡ್ಡ ನೋಟು ನಿಷೇಧ ಮಾಡಿದ್ದರಿಂದ, ಮೋದಿ ಎಂದರೆ ಪ್ರತಿಪಕ್ಷಗಳು ಉರಿದು ಬೀಳುತ್ತಿವೆ. ಈ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಮಾತ್ರ ಎಲ್ಲರಿಗಿಂತ ಮುಂದೆ ನಿಂತಿದ್ದಾರೆ.

ಈಗ ಚುನಾವಣೆ ಎದುರಾದರೆ ಮೋದಿಯವರು ಗಂಟುಮೂಟೆ ಕಟ್ಟಬೇಕು, ಮುಂದಿನ ಸಿಎಂ ಮಮತಾ ಬ್ಯಾನರ್ಜೀನೇ ಎಂದು ಆ ಪಕ್ಷದ ಪ್ರಮುಖ ನಾಯಕ, ಮಾಜಿ ಸಚಿವ ಮುಕುಲ್ ರಾಯ್ ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ. 2019 ರ ಚುನಾವಣೆಯಲ್ಲಿ ಯಾರಿಗೆಷ್ಟು ಸೀಟು ಅಂತ ಭವಿಷ್ಯದ ಕೂಡಾ ಲಿಕ್ಕ ಬಿಡಿಸಿ ಕೂತಿದ್ದಾರೆ.

ಚುನಾವಣೆ ಎದುರಾದರೆ ಬಿಜೆಪಿ, ಕಾಂಗ್ರೆಸ್ ನೆಲಕಚ್ಚಲಿದ್ದು, ತೃಣಮೂಲ ಕಾಂಗ್ರೆಸ್ 42 ಲೋಕ ಸಭಾ ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷಗಳಲ್ಲಿ ಒಂದಾಗಿ ನಿಲ್ಲಲಿದೆ. ಮುಂದಿನ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ. ಲಾಲೂ, ನಿತೀಶ್ ತಲಾ 25 ಸೀಟು, ನವೀನ್ ಪಟ್ನಾಯಕ್ ರವರ ಬಿಜೆಡಿ 20, ಡಿಎಂಕೆ ಅಥವಾ ಎಐಡಿಎಂಕೆ 40 ಸೀಟು ಗಳಿಸುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.