ವಿಮಾನದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಜೈಲು ಸೇರಿದ ಕಾಮುಕ – News Mirchi

ವಿಮಾನದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಜೈಲು ಸೇರಿದ ಕಾಮುಕ

ಜೂನ್ 27ರಂದು ಮುಂಜಾನೆ ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 31 ರ ಹರೆಯದ ಓರ್ವ ವ್ಯಕ್ತಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಜೈಲು ಸೇರಿದ್ದಾನೆ. ಪಕ್ಕದ ಸೀಟಲ್ಲಿ ಕೂತಿದ್ದ ಮಹಿಳೆ ನಿದ್ದೆಗೆ ಜಾರಿದ್ದಾಗ, ಸಬೀನ್ ಹಮ್ಜಾ ಎಂಬ ವ್ಯಕ್ತಿ ಆಕೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾಗ, ಮಹಿಳೆಗೆ ಎಚ್ಚರವಾಗಿ ಎದ್ದು ನೋಡಿದಾಗ ಆತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇದರಿಂದ ಗಾಬರಿಗೊಂಡ ಆಕೆ ಕೂಡಲೇ ವಿಮಾನ ಸಿಬ್ಬಂದಿಗೆ ಗಮನಕ್ಕೆ ತಂದಿದ್ದರು.

ವಿಮಾನ ಸಿಬ್ಬಂದಿಗೆ ಬರುವ ವೇಳೆಗೆ ಆತ ತನ್ನ ಪ್ಯಾಂಟ್ ಜಿಪ್ ಹಾಕಿಕೊಳ್ಳಲು ಪ್ರಯತ್ನಿಸುತ್ತಿದ್ದದ್ದು ಸಿಬ್ಬಂದಿಗೆ ಕಂಡು ಬಂದಿತ್ತು. ಆಗ ಎಚ್ಚರಿಕೆ ನೀಡಿ ಸುಮ್ಮನಾಗಿದ್ದ ಸಿಬ್ಬಂದಿ, ವಿಮಾನ ಮುಂಬೈ ತಲುಪುತ್ತಿದ್ದಂತೆ, ಆತನನ್ನು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಒಪ್ಪಿಸಿದರು. ಪೊಲೀಸರು ಹಮ್ಜಾ ವಿರುದ್ಧ ಎಫ್.ಐ.ಆರ್. ದಾಖಲಿಸಿಕೊಂಡು ಬಂಧಿಸಿದ್ದಾರೆ.

Loading...