ಮೋದಿ ಹೆಸರಲ್ಲಿ ವಂಚನೆ, ಎನ್.ಜಿ.ಒ ವಿರುದ್ಧ ದೂರು ದಾಖಲಿಸಿಕೊಂಡ ಸಿಬಿಐ – News Mirchi

ಮೋದಿ ಹೆಸರಲ್ಲಿ ವಂಚನೆ, ಎನ್.ಜಿ.ಒ ವಿರುದ್ಧ ದೂರು ದಾಖಲಿಸಿಕೊಂಡ ಸಿಬಿಐ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ದುರುಪಯೋಗ ಮಾಡಿಕೊಂಡು ದೇಣಿಗೆಗಳನ್ನು ಸಂಗ್ರಹಿಸುತ್ತಿದ್ದ “ನರೇಂದ್ರ ಮೋದಿ ವಿಚಾರ್ ಮಂಚ್” ಹೆಸರಿನ ಎನ್.ಜಿ.ಒ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಸಂಸ್ಥೆಯ ಅಧ್ಯಕ್ಷ ಜೆ.ಪಿ ಸಿಂಗ್ ಮತ್ತಿತರರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಹರಿಯಾಣ ರಿಜಿಸ್ಟ್ರೇಷನ್ ಅಂಡ್ ರೆಗ್ಯುಲೇಷನ್ ಆಫ್ ಸೊಸೈಟೀಸ್ ಆಕ್ಟ್ ಅಡಿಯಲ್ಲಿ ಈ ಸಂಸ್ಥೆಯು ನೋಂದಣಿಯಾಗಿದ್ದು, ಈ ಸಂಸ್ಥೆಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಹೇಳಿದೆ.

ಸಂಸ್ಥೆಯ ಅಧ್ಯಕ್ಷ ಜೆ.ಪಿ ಸಿಂಗ್ ಕಾನೂನು ಬಾಹಿರವಾಗಿ ಪ್ರಧಾನಿ ಹೆಸರು ಬಳಸಿಕೊಂಡು ಜನರ ಬಳಿ ಹಣ ಸಂಗ್ರಹಿಸುತ್ತಿದ್ದ ಎಂದು ಸಿಬಿಐ ಹೇಳಿದೆ. ಸಂಸ್ಥೆಯು www.nmvmindia.org ಎಂಬ ವೆಬ್ಸೈಟ್ ಅನ್ನೂ ನಿರ್ವಹಿಸುತ್ತಿದೆ.

Loading...