ಹಾವಿನ ದ್ವೇಷ? ರಕ್ಷಣೆಗೆ ಅಂಗರಕ್ಷಕರು! – News Mirchi
We are updating the website...

ಹಾವಿನ ದ್ವೇಷ? ರಕ್ಷಣೆಗೆ ಅಂಗರಕ್ಷಕರು!

ಶಹಜಹಾನ್ಪುರ(ಉ.ಪ್ರದೇಶ): ತನ್ನ ಬೆನ್ನು ಬಿದ್ದಿರುವ ಹಾವಿನಿಂದ ಕಂಗೆಟ್ಟಿರುವ ಯುವಕನೊಬ್ಬ ಇಬ್ಬರು ಅಂಗರಕ್ಷಕರ ಭದ್ರತೆಯ ನಡುವೆ ಕಾಲ ಕಳೆಯುತ್ತಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಭಾರಿ ತನ್ನ ಮಗ ಬ್ರಿಸ್ಬಾನ್(21) ನನ್ನು ಕಚ್ಚಿರುವುದಾಗಿ ಆತನ ತಂದೆ ರೈತ ಸುರೇಂದ್ರ ಕುಮಾರ್ ಹೇಳುತ್ತಾರೆ. ಹೀಗಾಗಿ ಆ ಹಾವನ್ನು ಕೊಂದು ಅದರ ತಲೆ ತಂದವರಿಗೆ 5 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಇದರಿಂದ ಪ್ರಯೋಜನವಾಗದಿದ್ದಾಗ ತನ್ನ ಮಗನಿಗಾಗಿ ಇಬ್ಬರು ಅಂಗರಕ್ಷಕರನ್ನು ನೇಮಿಸಿದ್ದಾರೆ. ಮಗ ಎಲ್ಲಿ ಹೋದರೂ ಆ ಇಬ್ಬರೂ ಅಂಗರಕ್ಷಕರು ಬಂದೂಕು ಹಿಡಿದು ಆತನನ್ನು ಹಿಂಬಾಲಿಸುತ್ತಾರೆ. ಬ್ರಿಜ್ಬಾನ್ ತಂದೆ ಮಾತ್ರವಲ್ಲ ಸ್ಥಳೀಯರೆಲ್ಲರೂ ಆ ಹಾವು ಸೇಡಿಗಾಗಿ ಪ್ರಯತ್ನಿಸುತ್ತಿದೆ ಎಂದಲೇ ನಂಬಿದ್ದಾರೆ.

ಬ್ರಿಜ್ಬಾನ್ ಕುಟುಂಬದವರು ಹೇಳುವ ಪ್ರಕಾರ, 2015 ಅಕ್ಟೋಬರ್ ನಲ್ಲಿ ಎರಡು ಹಾವುಗಳು ಒಂದಾಗಿದ್ದ ಸಮಯದಲ್ಲಿ ಒಂದು ಹಾವನ್ನು ಬ್ರಿಸ್ಬಾನ್ ಕೊಂದಿದ್ದನಂತೆ. ಅದಾದ ನಂತರ ನವೆಂಬರ್ 2016 ರಲ್ಲಿ ಆತನಿಗೆ ಆತನ ದಾಳಿಯಿಂದ ತಪ್ಪಿಸಿಕೊಂಡಿದ್ದ ಮತ್ತೊಂದು ಹಾವು ಕಚ್ಚಿತ್ತಂತೆ. ಅದಾದ ನಂತರ ಮೇ, ಜುಲೈ ಮತ್ತು ಆಗಸ್ಟ್ ಮೊದಲ ವಾರದಲ್ಲಿಯೂ ಆತನಿಗೆ ಹಾವು ಕಚ್ಚಿದೆ.

ಆ ಹಾವಿನ ಸಂಗಾತಿಯನ್ನು ಕೊಂದಿದ್ದರಿಂದ ಮತ್ತೊಂದು ಹಾವು ನನ್ನ ಮಗನ ಮೇಲೆ ಸೇಡಿಗಾಗಿ ಬೆನ್ನು ಬಿದ್ದಿದೆ. ಈಗಾಗಲೇ ನಾಲ್ಕು ಬಾರಿ ಆತನ ಮೇಲೆ ದಾಳಿ ಮಾಡಿದೆ. ಇನ್ನು ಹೆಚ್ಚು ತೊಂದರೆ ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲ ಎಂದು ಬ್ರಿಜ್ಬಾನ್ ನ ತಂದೆ ಹೇಳುತ್ತಾರೆ.

ಹಾವು ಕಚ್ಚಿದಾಗಲೆಲ್ಲಾ ಚಿಕಿತ್ಸೆಗಾಗಿ ಸ್ಥಳೀಯ ಹಾವಾಡಿಗನ ಬಳಿಗೇ ಆತನನ್ನು ಕರೆದೊಯ್ದಿದ್ದರು. ಮನೆಯಿಂದ ಹೊರಬರಲು ಹೆದರುವಂತಹ ಸ್ಥಿತಿ. ದಿನದ ಬಹುತೇಕ ಸಮಯವನ್ನು ಮನೆಯ ಹೊರಗೆ ಹಾಕಿರುವ ಮಂಚದ ಮೇಲೆಯೇ ಕಳೆಯುತ್ತಾನೆ. ಈ ಸಂದರ್ಭದಲ್ಲಿ ಇಬ್ಬರು ಅಂಗರಕ್ಷಕರು ಆತನ ಕಾವಲಿಗಿರುತ್ತಾರೆ. ಬ್ರಿಜ್ಬಾನ್ ಮನೆಯವರು ಅಷ್ಟೊಂದು ಹೆದರಲು ಮತ್ತೊಂದು ಕಾರಣವೂ ಇದೆ. ಆ ಹಾವು ಆಗಾಗ ಮನೆಯ ಸಮೀಪ ಕಾಣಿಸಿಕೊಂಡು ಅದೃಶ್ಯವಾಗುತ್ತಿದೆಯಂತೆ.

ಪ್ರತಿ ಬಾರಿ ಹಾವು ಕಡಿತದಿಂದ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವುದಕ್ಕೆ ವಿಷಯಕಾರಿಯಲ್ಲದ ಹಾವು ಕಚ್ಚಿರುವುದೇ ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಹಲವು ಬಾರಿ ಆತ ಹಾವು ಕಡಿತಕ್ಕೊಳಗಾಗಿರುವುದು ಕಾಕತಾಳೀಯವಷ್ಟೇ, ಒಂದೇ ಹಾವು ಕಚ್ಚಿದೆ ಎಂದು ಹೇಳಲಾಗದು. ಹಾವು ದ್ವೇಷ ಸಾಧಿಸುತ್ತದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!