ಒಂದೇ ಹೋಲಿಕೆ, ಮಾಡದ ತಪ್ಪಿಗೆ 17 ವರ್ಷ ಜೈಲಿನಲ್ಲಿ ಕೊಳೆಸಿತು – News Mirchi

ಒಂದೇ ಹೋಲಿಕೆ, ಮಾಡದ ತಪ್ಪಿಗೆ 17 ವರ್ಷ ಜೈಲಿನಲ್ಲಿ ಕೊಳೆಸಿತು

ಪ್ರಪಂಚದಲ್ಲಿ ಒಂದೇ ರೀತಿ ಕಾಣುವ ಏಳು ಜನರಿರುತ್ತಾರೆ ಎಂದು ನಾವು ಕೇಳಿದ್ದೇವೆ. ಆದರೆ ಹೆಚ್ಚೆಂದರೆ ಅಂತಹ ಅವಳಿ ಮಕ್ಕಳನ್ನು ನೋಡಿರುತ್ತೇವೆ ಅಷ್ಟೇ. ಒಬ್ಬ ವ್ಯಕ್ತಿಯನ್ನು ಹೋಲುವ ಮತ್ತೊಬ್ಬ ವ್ಯಕ್ತಿಯಿದ್ದರೆ ಜೀವನದಲ್ಲಿ ಎಷ್ಟೊಂದು ಕಷ್ಟ ಎದುರಾಗಬಹುದು ಎಂಬುದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿ… ಯಾವುದೋ ಅಪರಾಧ ಮಾಡಿದ್ದ ವ್ಯಕ್ತಿಯನ್ನು ಹೋಲುತ್ತಿದ್ದ ಕಾರಣಕ್ಕೆ 17 ವರ್ಷಗಳು ಜೈಲು ಶಿಕ್ಷೆ ಅನುಭವಿಸಿದ್ದಾನೆ ಮತ್ತೊಬ್ಬ ಅಮಾಯಕ.

ಮಿಸ್ಸೋರಿ ನಿವಾಸಿ ರಿಚರ್ಡ್ ಆಂಥೋನಿ ಜೋನ್ಸ್ ಎಂಬಾತನನ್ನು 1999 ರಲ್ಲಿ ದರೋಡೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದಲ್ಲಿ ಆತನೇ ದರೋಡೆ ಮಾಡಿದ್ದಾಗಿ ಸಾಕ್ಷಿಗಳು ಹೇಳಿದ್ದರಿಂದ, ನ್ಯಾಯಾಲಯ ಆತನಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ 17 ವರ್ಷಗಳ ನಂತರ ಜೋನ್ಸ್ ಅಪರಾಧಿಯಲ್ಲಿ, ಆತನ ವಿಷಯದಲ್ಲಿ ತಪ್ಪು ನಡೆದಿದೆ, ಆತ ನಿರಪರಾಧಿ ಎಂದು ತಿಳಿದು ಬಿಡುಗಡೆ ಮಾಡಲಾಯಿತು. [ಲಾಲೂ ಕುಟುಂಬದ ಬೇನಾಮಿ ಆಸ್ತಿ ವಶಪಡಿಸಿಕೊಂಡ ತೆರಿಗೆ ಇಲಾಖೆ]

ನಡೆದಿದ್ದೇನು…..
ಕಾನ್ಸಸ್ ನಿವಾಸ ರಿಕೀ ಅಮೋನ್ ಎಂಬ ವ್ಯಕ್ತಿ ಮಹಿಳೆಯೊಬ್ಬರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಅಲ್ಲಿದ್ದ ಜನ ಪೊಲೀಸರಿಗೆ ಮಾಹಿತಿ ನೋಡಿದರು. ಪೊಲೀಸರು ಅವರಿಗೆ ಕೆಲ ಶಂಕಿತ ವ್ಯಕ್ತಿಗಳ ಫೋಟೋ ತೋರಿಸಿದರು. ಆದರೆ ಅದರಲ್ಲಿ ರಿಕೀ ಅಮೋನ್ ಫೋಟೋ ನೋಡಿದ ಜನರು ಆತನೇ ದರೋಡೆ ನಡೆಸಿದ್ದು ಎಂದು ಹೇಳಿದರು. ಹೀಗಾಗಿ ಪೊಲೀಸರು ಜೋನ್ಸ್ ನನ್ನು ಹಿಡಿದು ಜೈಲಿಗಟ್ಟಿದರು. ತಾನು ಯಾವುದೇ ಅಪರಾಧ ಎಸಗಿಲ್ಲ ಎಂದು ಎಷ್ಟೇ ಮನವಿ ಮಾಡಿದರು ಪೊಲೀಸರು ಕೇಳಲಿಲ್ಲ. ಸಾಕ್ಷಿಗಳೂ ಕೂಡಾ ರಿಕೀ ಮತ್ತು ಜೋನ್ಸ್ ನಡುವೆ ಒಂದೇ ರೀತಿಯ ಹೋಲಿಕೆ ಇರುವುದರಿಂದ ದರೋಡೆ ನಡೆಸಿದ್ದು ಜೋನ್ಸ್ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದರು.

ಹೀಗಾಗಿ ನ್ಯಾಯಾಲಯ ಆತನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಎಷ್ಟು ಬಾರಿ ಕೋರ್ಟ್ ಗೆ ಮನವಿ ಮಾಡಿದರೂ, ಕೋರ್ಟ್ ಆತನ ಮನವಿಯನ್ನು ತಿರಸ್ಕರಿಸಿತ್ತು. ಆದರೆ ಇತ್ತೀಚೆಗೆ ಮತ್ತೊಮ್ಮೆ ಜೋನ್ಸ್ ಮನವಿ ಮಾಡಿದಾಗ ವಿಚಾರಣೆ ನಡೆಸಿದ ಪೊಲೀಸರು ಜೋನ್ಸ್ ನಂತೆಯೇ ರಿಕೀ ಎಂಬ ವ್ಯಕ್ತಿಯಿದ್ದಾನೆ ಎಂಬ ಸತ್ಯ ತಿಳಿದುಕೊಂಡರು. ಆತ ಈಗಾಗಲೇ ಮತ್ಯಾವುದೋ ಅಪರಾಧ ಮಾಡಿ ಕ್ಯಾನ್ಸಸ್ ಜೈಲಿನಲ್ಲಿದ್ದಾನೆ ಎಂಬುದು ತಿಳಿಯಿತು. ಹೀಗಾಗಿ ಯಾವ ತಪ್ಪೂ ಮಾಡದ ಜೋನ್ಸ್ ನನ್ನು ಪೊಲೀಸರ ಬಿಡುಗಡೆಮಾಡಿದರು. 17 ವರ್ಷ ಜೀವನ ವ್ಯರ್ಥವಾದರೂ ಕೊನೆಗೂ ತನ್ನ ಕುಟುಂಬವನ್ನು ಸೇರಿಕೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾನೆ ಜೋನ್ಸ್.

Loading...