ಚಪಾತಿ ದುಂಡಗಿಲ್ಲವೆಂದು ಗರ್ಭಿಣಿ ಪತ್ನಿ ಹತ್ಯೆ – News Mirchi

ಚಪಾತಿ ದುಂಡಗಿಲ್ಲವೆಂದು ಗರ್ಭಿಣಿ ಪತ್ನಿ ಹತ್ಯೆ

ಚಪಾತಿಗಳು ದುಂಡಗಿಲ್ಲ ಎಂಬ ನೆಪದಿಂದ ಗರ್ಭಿಣಿಯಾದ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಒಬ್ಬ ಪಾಪಿ ಪತಿ. ಈ ಘಟನೆ ಉತ್ತರ ದೆಹಲಿಯ ಜಹಂಗೀರ್ ಪುರದಲ್ಲಿ ನಡೆದಿದೆ. ಶನಿವರ ರಾತ್ರಿ ನಡೆದ ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ನಾಲ್ಕು ವರ್ಷಗಳ ಮಗುವನ್ನು ಕೊಠಡಿಯಲ್ಲಿ ಕೂಡಿಹಾಕಿದ್ದು, ತನ್ನ ಸಹೋದರಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದರೆ, ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಉತ್ತರ ದೆಹಲಿಯ ಜಗಂಗೀರ್ ಪುರದ ಸಿಮ್ರನ್ ಎಂಬ 22 ವರ್ಷದ ಮಹಿಳೆಯೇ ಪತಿಯಿಂದ ಹತ್ಯೆಗೊಳಗಾದವಳು. ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ವೈದ್ಯರು ಹೇಳಿದ್ದಾರೆ.

ಚಿತ್ರೀಕರಣ ವೇಳೆ ಭುವನ್ ಕಾಲಿಗೆ ಕಚ್ಚಿದ ಪ್ರಥಮ್? ಆಗಿದ್ದೇನು?

ಚಪಾತಿಗಳು ದುಂಡಗೆ ಮಾಡಿಲ್ಲವೆಂದು ಪತಿ ಜಗಳಕ್ಕಿಳಿದಿದ್ದ ಅಪ್ಪ. ಆದರೆ ಅಮ್ಮ ಚೆನ್ನಾಗಿ ಅಡುಗೆ ಮಾಡುತ್ತಾಳೆ ಎಂದು ಮೃತ ಮಹಿಳೆಯ ಮಗಳು ಪೊಲೀಸರಿಗೆ ಹೇಳಿದ್ದಾಳೆ. ಜಗಳ ಅಲ್ಲಿಗೆ ನಿಂತಿಲ್ಲ, ಶನಿವಾರ ರಾತ್ರಿ 10:30ಕ್ಕೆ ಮತ್ತೆ ಜಗಳ ಆರಂಭವಾಗಿ ಸಿಮ್ರನ್ ಹೊಟ್ಟೆಗೆ ಪತಿ ಬಲವಾಗಿ ಒದ್ದಿದ್ದು, ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ ಮಗಳನ್ನು ಕೊಠಡಿಯಲ್ಲಿ ಹಾಕಿ ಬೀಗ ಹಾಕಿದವನು, ಕೆಲ ಸಮಯದ ನಂತರ ಆಕೆಯ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ದಂಪತಿಗಳು ಮದುವೆಗೂ ಮುನ್ನ ಒಂದು ವರ್ಷ ಸಹಜೀವನ ನಡೆಸಿದ್ದರು. ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಕಳೆದ ಎರಡು ವರ್ಷಗಳಿಂದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಘಟನೆ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈಕೆಯ ಕಣ್ಣಿನಲ್ಲಿ ಸಿಕ್ಕಿದ್ದು 27 ಕಾಂಟ್ಯಾಕ್ಟ್ ಲೆನ್ಸ್!

Loading...