ಕೊರಳಿಗೆ ಹಾವು ಸುತ್ತಿಕೊಳ್ಳುವ ಪ್ರಯತ್ನ : ವ್ಯಕ್ತಿಯ ಸಾವು – News Mirchi

ಕೊರಳಿಗೆ ಹಾವು ಸುತ್ತಿಕೊಳ್ಳುವ ಪ್ರಯತ್ನ : ವ್ಯಕ್ತಿಯ ಸಾವು

ಹಾವನ್ನು ಕೊರಳಿಗೆ ಸುತ್ತಿಕೊಂಡು ವೀಡಿಯೋ ಮಾಡಲು ಪ್ರಯತ್ನಿಸಿದ 35 ವರ್ಷದ ವ್ಯಕ್ತಿಯೊಬ್ಬ ಹಾವು ಕಡಿದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಧಾರ್ಮಿಕ ಸಮಾರಂಭದ ವೇಳೆ ಹಾವಾಡಿಗ ಹಾವನ್ನು ದೇವಸ್ತಾನದ ಬಳಿ ತಂದು ಬಾಬೂರಾಮ್ ಜಖರ್ ಎಂಬಾತನ ಕೊರಳಿಗೆ ಸುತ್ತಿದ್ದ. ಈ ವೇಳೆ ಈ ಘಟನೆ ನಡೆದಿದೆ. ಹಾವು ಕಡಿದ ಕೂಡಲೇ ಬಾಬೂರಾಮನಿಗೆ ಅದು ಅರವಿಗೆ ಬಂದಿಲ್ಲ. ಸ್ವಲ್ಪ ಸಮಯದ ನಂತರ ಅನುಮಾನ ಬಂದು ಹಾವಾಡಿಗನನ್ನು ಹಾವು ಕಚ್ಚಿದೆಯಾ ನೋಡು ಎಂದು ಪ್ರಶ್ನಿಸಿದ್ದಾನೆ. ಆದರೆ ಪ್ರಜ್ಞೆ ತಪ್ಪುವ ತನಕ ಹಾವಾಡಿಗ ಆತನ ಮಾತನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. [ಇಲ್ಲಿ ಐಫೋನ್ ಗಳ ಮೇಲೆ 20,000 ರಿಯಾಯಿತಿ!]

ಪ್ರಜ್ಞೆ ತಪ್ಪಿದ ಬಾಬೂರಾಮನನ್ನು ಮೊದಲು ಹತ್ತಿರದ ದೇವಸ್ಥಾನದ ಬಳಿ ವಿಷ ತೆಗೆಯಲು ವ್ಯಕ್ತಿಯೊಬ್ಬನ ಬಳಿ ಕರೆದೊಯ್ದಿದ್ದು, ಪರಿಸ್ಥಿತಿ ಗಂಭೀರವಾದ ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಘಟನೆಯ ನಂತರ ಹಾವಾಡಿಗ ಪರಾರಿಯಾಗಿದ್ದು, ಪೊಲೀಸರು ಹಾವಾಡಿಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೀಡಿಯೋ ನೋಡಿ

Loading...