ಮಳೆಗಾಗಿ ಪರಸ್ಪರ ಮದುವೆಯಾದ ಇಬ್ಬರು ಪುರುಷರು – News Mirchi

ಮಳೆಗಾಗಿ ಪರಸ್ಪರ ಮದುವೆಯಾದ ಇಬ್ಬರು ಪುರುಷರು

ಇಂದೋರ್: ಮದುವೆಯಾಗಿ ಮಕ್ಕಳಿರುವ ಇಬ್ಬರು ಪುರುಷರು ತಮ್ಮ ತಮ್ಮ ಪತ್ನಿಯರು ನೋಡುತ್ತಿರುವಂತೆಯೇ ಪರಸ್ಪರ ಮದುವೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಂದೋರ್ ನ ಸಕ್ರಾಮ್ ಆಶೀರ್ವಾರ್, ರಾಕೇಶ್ ಅದ್ಜಾನ್ ಎಂಬುವವರೇ ಹಿಂದೂ ಸಂಪ್ರದಾಯದಂತೆ ಗುರುವಾರ ಮದುವೆಯಾದವರು. ಈ ಮದುವೆ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಜನರು ಜೋಡಿಯನ್ನು ಆಶೀರ್ವದಿಸಿದರೆ, ಯುವತಿಯರು ನೃತ್ಯ ಮಾಡಿ ಮನರಂಜಿಸಿದರು.

ವಿದೇಶಗಳಲ್ಲಾಗುವಂತೆ ನಿಜವಾಗಿ ಪುರುಷರು ಪರಸ್ಪರ ಮದುವೆಯಾಗಿದ್ದಾರೆ ಎಂದು ಭಾವಿಸಬೇಡಿ. ಏಕೆಂದರೆ ಈ ಮದುವೆ ಲೋಕಕಲ್ಯಾಣಕ್ಕಾಗಿ ನಡೆದ ಸಾಂಕೇತಿಕ ಮದುವೆಯಂತೆ. ಸರಿಯಾಗಿ ಮಳೆಯಿಲ್ಲದೆ ಹಲವು ರಾಜ್ಯಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಹೀಗಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ಒಳಿತಾಗುವ ನಂಬಿಕೆಯಿಂದ ವರುಣನ ಕೃಪೆಗಾಗಿ ಕಪ್ಪೆಗಳಿಗೆ, ನಾಯಿಗಳಿಗೆ ಮದುವೆ ಮಾಡಿದ್ದಾರೆ. ಇನ್ನೂ ಕೆಲವು ಕಡೆ ಬಾಲ್ಯವಿವಾಹಗಳು ನಡೆದಿರುವುದು ವರದಿಯಾಗಿವೆ. ಇಂದೋರ್ ನಲ್ಲಿ ಮಾತ್ರ ಪುರಷ ಪುರಷನ ನಡುವೆ ಮದುವೆಯಾಗಿದೆ.

ಐಟಿ ರೇಡ್: ಇದುವರೆಗೂ ಪತ್ತೆಯಾಗಿದ್ದು 300 ಕೋಟಿ ಅಘೋಷಿತ ಆಸ್ತಿ?

ಸಕ್ರಾಮ್, ರಾಕೇಶ್ ವಧುಗಳಂತೆ ಭಾವಿಸಿ, ಮಳೆರಾಯನನ್ನು ಅವರ ಪತಿಯಂತೆ ಭಾವಿಸುತ್ತೇವೆಂದು ಕಾರ್ಯಕ್ರಮದ ಆಯೋಜಕ ರಮೇಶ್ ಸಿಂಗ್ ತೋಮರ್ ಹೇಳಿದ್ದಾರೆ. ಮದುವೆಯಾದ ಇಬ್ಬರೂ ರಮೇಶ್ ಸಿಂಗ್ ಬಳಿಯೇ ಕೆಲಸ ಮಾಡುತ್ತಿದ್ದಾರೆ. ಮದುವೆ ಕಾರ್ಯಕ್ರಮ ಮುಗಿದ ನಂತರ ತಮ್ಮ ತಮ್ಮ ಪತ್ನಿ ಮಕ್ಕಳೊಂದಿಗೆ ಇಬ್ಬರೂ ಮನೆ ಸೇರಿದ್ದಾರೆ.

ಜಿಯೋದಂತೆಯೇ ಏರ್ಟೆಲ್ 2 ಹೊಸ ಆಫರ್’ಗಳು

Loading...