ಸಿದ್ದರಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ಹಣ ದೋಚಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟಕ್ಕೆ ಆಗಮಿಸುತ್ತಿದ್ದ ಪ್ರೇಮಿಗಳನ್ನು ಬೆತ್ತಲೆಗೊಳಿಸಿ ಹಣ ದೋಚಿದ್ದ ಆರೋಪಿ ತುಮಕೂರು ತಾಲ್ಲೂಕಿನ ದುರ್ಗದ ಹಳ್ಳಿಯ ಭೀಮರಾಜು ಎಂಬಾತನಿಗೆ 4 ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 42 ಸಾವಿರ ದಂಡ ವಿಧಿಸಿದೆ.

ಮಾರ್ಚ್ 20 ರಂದು ಪ್ರೇಮಿಗಳಿಬ್ಬರು ಸಿದ್ದರಬೆಟ್ಟಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಭೀಮರಾಜು ಫಾರೆಸ್ಟ್ ಗಾರ್ಡ್ ಸೋಗಿನಲ್ಲಿ ಪ್ರೇಮಿಗಳ ಬಳಿ ತೆರಳಿ ಅವರನ್ನು ವಿವಸ್ತ್ರಗೊಳಿಸಿ ಹಣ ದೋಚಿದ್ದ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.