ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ಧರಿಸಿ ಓಡಾಡುತ್ತಿದ್ದವನ ಬಂಧನ

ಬೆಂಗಳೂರು: ಮಹಾರಾಣಿ ಕಾಲೇಜಿನ ಮಹಿಳಾ ಹಾಸ್ಟೆಲ್ ಗೆ ನುಗ್ಗಿ ಅರೆ ನಗ್ನನಾಗಿ ವಿದ್ಯಾರ್ಥಿಗಳ ಒಳ ಉಡುಪು ಧರಿಸಿ ಓಡಾಡಿ ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯ ಬಂಧನವಾಗಿದೆ. ಬಂಧಿತನನ್ನು ಬಿಹಾರ ಮೂಲದ ಅಬು ತಾಲಿಮ್ ಎಂದು ಗುರುತಿಸಲಾಗಿದೆ. ಆರೋಪಿ 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ರೇಸ್ ಕೋರ್ಸ್ ನಲ್ಲಿ ಕುದುರೆಗಳನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ರಾತ್ರಿ ವೇಳೆ ಹಾಸ್ಟೆಲ್ ಗೆ ಹೊಂದಿಕೊಂಡಿರುವ ರೇಸ್ ಕೋರ್ಸ್ ನ ಗೋಡೆ ಹತ್ತಿ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ನುಗ್ಗಿ ಕದ್ದು ಮುಚ್ಚಿ ವಿದ್ಯಾರ್ಥಿನಿಯರ ಒಳ ಉಡುಪು ಧರಿಸಿ ಓಡಾಡುತ್ತಿದ್ದ. ಕೆಲವೊಮ್ಮೆ ವಿದ್ಯಾರ್ಥಿನಿಯರ ಕಣ್ಣಿಗೆ ಬಿದ್ದು ಪರಾರಿಯಾಗಿದ್ದ. ಆರೋಪಿಯನ್ನು ಪತ್ತೆ ಹಚ್ಚಲು ಹಾಸ್ಟೆಲ್ ಆವರಣದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಹೀಗಾಗಿ ಈ ವಿಕೃತಕಾಮಿ ಸಿಕ್ಕಿಬಿದ್ದಿದ್ದಾನೆ.