ಗಾಂಜಾವನ್ನು ಕಾನೂನುಬದ್ಧಗೊಳಿಸಿ: ಮೇನಕಾ ಗಾಂಧಿ – News Mirchi

ಗಾಂಜಾವನ್ನು ಕಾನೂನುಬದ್ಧಗೊಳಿಸಿ: ಮೇನಕಾ ಗಾಂಧಿ

ನವದೆಹಲಿ: ಮಾದಕ ವಸ್ತು ಎಂದು ಭಾವಿಸಲಾಗುವ ಗಾಂಜಾ ಬಳಕೆಯನ್ನು ವೈದ್ಯಕೀಯ ಅಗತ್ಯಗಳಿಗಾಗಿ ಕಾನೂನುಬದ್ಧಗೊಳಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಅಮೆರಿಕ, ನೆದರ್ಲ್ಯಾಂಡ್ ಮುಂತಾದ ಕೆಲವು ದೇಶಗಳಲ್ಲಿ ವೈದ್ಯಕೀಯ ಬಳಕೆಗಾಗಿ ಗಾಂಜಾವನ್ನು ಕಾನೂನುಬದ್ಧಗೊಳಿಸಲಾಗಿದೆ. ಮಾದಕ ಪದಾರ್ಥಗಳ ಸಮಸ್ಯೆಗಳನ್ನು ಎದುರಿಸಲು ಅಮೆರಿಕಾದಲ್ಲಿ ಇಂತಹ ಪದ್ದತಿಗಳನ್ನೇ ಅವಲಂಭಿಸುತ್ತಿದ್ದಾರೆ ಎಂಬುದನ್ನು ಅವರು ನೆನಪಿಸಿದರು.

ನ್ಯಾಷನಲ್ ಡ್ರಗ್ ಡಿಮ್ಯಾಂಡ್ ರಿಡಕ್ಷನ್ ನೀತಿ ಕುರಿತು ಕ್ಯಾಬಿನೆಟ್ ನೋಟ್ ಅನ್ನು ಅಧ್ಯಯನ ನಡೆಸುತ್ತಿರುವ ಸಚಿವರ ತಂಡ ನಡೆಸಿದ ಸಭೆಯಲ್ಲಿ ಆಕೆ ಈ ಸೂಚನೆ ನೀಡಿದರು. ಇದರಿಂದಾಗಿ ಮಾದಕ ದ್ರವ್ಯ ದುರ್ಬಳಕೆ ಕಡಿಮೆಯಾಗುತ್ತದೆ. ಅಮೆರಿಕಾದಂತೆಯೇ ಭಾರತದಲ್ಲಿಯೂ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕೆಂದು ಮೇನಕಾ ಗಾಂಧಿ ಹೇಳಿದ್ದಾರೆ.

Loading...