ಸಣ್ಣ ವ್ಯಾಪಾರಿ, ತರಕಾರಿ ವ್ಯಾಪಾರಿ, ಬಡವರ ಬಳಿ ಚೌಕಾಶಿ ಮಾಡಬೇಡಿ – News Mirchi

ಸಣ್ಣ ವ್ಯಾಪಾರಿ, ತರಕಾರಿ ವ್ಯಾಪಾರಿ, ಬಡವರ ಬಳಿ ಚೌಕಾಶಿ ಮಾಡಬೇಡಿ

ಸಣ್ಣ ಅಂಗಡಿಯವರು, ತರಕಾರಿ ಮಾರಾಟಗಾರರು ಮತ್ತು ಆಟೋರಿಕ್ಷಾ ಚಾಲಕರ ಬಳಿ ಸಣ್ಣ ಮೊತ್ತಕ್ಕಾಗಿ ಚೌಕಾಶಿ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆge ಮನವಿ ಮಾಡಿದ್ದಾರೆ.

ಜನರು ಸಣ್ಣ ಸಣ್ಣ ಮೊತ್ತಕ್ಕಾಗಿ ಸಣ್ಣ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಆಟೋರಿಕ್ಷಾ ಚಾಲಕರು ಮತ್ತಿತರೆ ಬೆವರು ಸುರಿಸಿ ಕೆಲಸ ಮಾಡುವವರ ಬಳಿ ಚೌಕಾಶಿ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ಅಥವಾ ಐದು ರೂಪಾಯಿಗಳಿಂದ ನಮಗೆ ಹೆಚ್ಚು ನಷ್ಟವೇನೂ ಆಗೋದಿಲ್ಲ, ಆದರೆ ಜನರ ಇಂತಹ ವರ್ತನೆಗಳು ಬಡವರ ಮನಸ್ಸನ್ನು ಹೇಗೆ ನೋಯಿಸುತ್ತದೆ ಎಂದು ಯೋಚಿಸಿದ್ದೀರಾ ಎಂದು ಪ್ರಶ್ನಿಸಿದರು. ಬಡವನ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಾಗ ಆತನಿಗೆ ಖಂಡಿತ ನೋವಾಗುತ್ತದೆ ಎಂದು ಹೇಳಿದರು.

ಸಣ್ಣ ವ್ಯಾಪಾರಿಗಳ ಬಳಿ ಚೌಕಾಶಿ ಮಾಡುವವರು ರೆಸ್ಟೋರೆಂಟ್ ಗಳಲ್ಲಿ ಎಷ್ಟೇ ಬಿಲ್ ಆದರೂ ಪಾವತಿಸಲು ಹಿಂದೆ ಮುಂದೆ ನೋಡುವುದಿಲ್ಲ. ಅಷ್ಟೇ ಅಲ್ಲ ಒಂದು ಸೀರೆ ಖರೀದಿಸಲು ಶೋರೂಮ್ ಗೆ ಹೋದಾಗ ನಾವು ಚೌಕಾಶಿ ಮಾಡುವುದಿಲ್ಲ. ಆದರೆ ಬಡವರ ವಿಷಯಕ್ಕೆ ಬಂದಾಗ ಮಾತ್ರ ಚೌಕಾಶಿಗೆ ಇಳಿಯುತ್ತೇವೆ ಎಂದು ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.

Loading...