ವೈವಾಹಿಕ ಅತ್ಯಾಚಾರ ಶಿಕ್ಷಾರ್ಹ ಅಪರಾಧವಲ್ಲ : ಸುಪ್ರೀಂ ಕೋರ್ಟ್

ಪತ್ನಿಯೊಂದಿಗೆ ಒತ್ತಾಯಪೂರ್ವಕವಾಗಿ ಸಂಭೋಗದಲ್ಲಿ ಪಾಲ್ಗೊಳ್ಳುವುದನ್ನು (ವೈವಾಹಿಕ ಅತ್ಯಾಚಾರ) ಅಪರಾಧವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ವೈವಾಹಿತ ಅತ್ಯಾಚಾರದ ಕುರಿತು ಸಂಸತ್ತು ವ್ಯಾಪಕ ಚರ್ಚೆ ನಡೆಸಿ ಅದು ಅತ್ಯಾಚಾರ ಅಪರಾಧವಲ್ಲ ಎಂದು ಪರಿಗಣಿಸಿದೆ. ಹಾಗಾಗಿ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಸ್ಟೀಸ್ ಎಂ.ಬಿ.ಲೋಕೂರ್, ಜಸ್ಟೀಸ್ ದೀಪಕ್ ಗುಪ್ತಾ ರವರ ನ್ಯಾಯಪೀಠ ಹೇಳಿದೆ.

ಐಪಿಸಿ ಸೆಕ್ಷನ್ 375 ಪ್ರಕಾರ 15 ವರ್ಷದ ತುಂಬಿದ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ವೇಳೆ ಪತ್ನಿಯ ವಯಸ್ಸು 15 ವರ್ಷದೊಳಗಿದ್ದು, ಸಮ್ಮತಿಯಿಂದಾಗಲೀ ಒತ್ತಾಯಪೂರ್ವಕವಾಗಿಯಾಗಲೀ ದೈಹಿಕ ಸಂಪರ್ಕ ನಡೆಸಿದರೆ ಅದು ಅಪರಾಧವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

[ಲಾಲೂ ನೀವೊಬ್ಬರೇ ಬಿಜೆಪಿ ಎದುರಿಸಲಾಗದು, ನಾನೂ ಬರ್ತೀನಿ: ಓವೈಸಿ]

ಇದೇ ವೇಳೆ 15-18 ವರ್ಷ ವಯಸ್ಸಿನ ವಿವಾಹಿತ ಬಾಲಕಿಯರನ್ನು ಅವರ ಸಂಗಾತಿಯ ಬಲವಂತದ ಲೈಂಗಿಕ ಚಟುವಟಿಕೆಗಳಿಂದ ಸಂರಕ್ಷಿಸುವ ಅಂಶವನ್ನು ಸಂಸತ್ತು ಚರ್ಚಿಸಿದೆಯೇ ಎಂದೂ ಸುಪ್ರೀ ಕೋರ್ಟ್ ಪ್ರಶ್ನಿಸಿದೆ.

ಪತ್ನಿಯ ವಯಸ್ಸು 15 ರಿಂದ 18 ರೊಳಗಿದ್ದು, ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಲು ಸಂವಿಧಾನಾತ್ಮಕವಾಗಿ ಇರುವ ಅವಕಾಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.