ನೋಟು ರದ್ದಾಯ್ತು, ಮದುವೆಯೂ ರದ್ದು : ಥ್ಯಾಂಕ್ಸ್ ಮೋದಿ – News Mirchi

ನೋಟು ರದ್ದಾಯ್ತು, ಮದುವೆಯೂ ರದ್ದು : ಥ್ಯಾಂಕ್ಸ್ ಮೋದಿ

ಹಳೆಯ ಗರಿಷ್ಠ ಮುಖಬೆಲೆಯ ನೋಟು ರದ್ದಾದ ಮೇಲೆ ಹಳೆಯ ನೋಟು ಕಂಡರೆ ಮಾರು ದೂರ ಹೋಗುತ್ತಿದ್ದಾರೆ ಎಲ್ಲಾ. ಇದೀಗ ಹೇಳ ಹೊರಟಿರುವುದು ನೋಟು ರದ್ದು ಪ್ರಭಾವ ಮದುವೆ ಮೇಲೆ ಹೇಗೆ ಪ್ರಭಾವ ಬೀರಿತು, ವಧು ಮೋದಿ ಕ್ರಮವನ್ನು ಮೆಚ್ಚಿಕೊಳ್ಳಲು ಕಾರಣವೇನು ಎಂಬುದನ್ನು…

ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ದೆಹಲಿಯ ಕವಿತ ಎಂಬ ಯುವತಿಗೆ ಮದುವೆ ನಿಶ್ಚಯವಾಗಿತ್ತು. ವರನ ಕಡೆಯವರು ವರದಕ್ಷಿಣೆಯಾಗಿ ಹೊಸ ನೋಟಿಗೆ ಬಿಗಿಪಟ್ಟು ಹಿಡಿದಿದ್ದಾರೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ವಧುವಿನ ಕಡೆಯವರು ಮನವಿ ಮಾಡಿದರೂ ವರನ ಕಡೆಯವರು ಒಪ್ಪದೆ ಹಠ ಹಿಡಿದು ಕೂತರು. ಕೊನೆಗೆ ಮದುವೆಯನ್ನೇ ರದ್ದು ಮಾಡಿಕೊಂಡರು.

ವಾಸ್ತವವಾಗಿ ಡಿಸೆಂಬರ್ 9 ಕ್ಕೆ ಕವಿತಳ ಮದುವೆ ನಿಶ್ಚಯವಾಗಿತ್ತು. ಆದರೆ ಕೆಲ ದಿನಗಳಿಂದ ವರನ ಕಡೆಯವರ ಮೇಲೆ ವಧುವಿನ ಕಡೆಯವರಿಗೆ ಅದೇನೋ ಅನುಮಾನ. ಮದುವೆ ರದ್ದು ಮಾಡೋಣವೆಂದರೆ ಅದಾಗಲೇ ನಿಶ್ಚಯವಾಗಿದ್ದ ಮದುವೆ ರದ್ದು ಮಾಡಲು ಕಾರಣ ಇರಲಿಲ್ಲ.

ಕೊನೆಗೆ ವರನ ಕಡೆಯವರಿಗಿದ್ದ ಹಣದ ವ್ಯಾಮೋಹದ ಕುರಿತು ಅರಿತ ವಧುವಿನ ಕಡೆಯವರು, ಹಳೆಯ ನೋಟು ರದ್ದುಗೊಂಡಿದ್ದರಿಂದ ಕಾರು ಇತರೆ ಸಾಮಗ್ರಿ ಕೊಳ್ಳುವುದು ಕಷ್ಟ, ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕೆಂದು ಕವಿತಾ ಮನೆಯವರು ಹೇಳಿದ್ದಾರೆ. ಇದನ್ನು ಕೇಳಿದ ವರನ ಕಡೆಯವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕಾರು ಇತರೆ ಸಾಮಾನು ಖರೀದಿಸುವವರೆಗೂ ಮದುವೆ ಮುಂದೂಡಿ ಎಂದು ವರನ ಕಡೆಯವರು ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಕವಿತಾ ಕಡೆಯವರು ಒಪ್ಪಲಿಲ್ಲ. ಹೀಗಾಗಿ ಕೊನೆಗೆ ವರನ ಕಡೆಯವರು ಮದುವೆ ರದ್ದುಗೊಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕವಿತಾ ಮದುವೆ ರದ್ದಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾಳೆ. ಹಣಕ್ಕಾಗಿ ಮದುವೆ ರದ್ದು ಮಾಡಿದ ವ್ಯಕ್ತಿ ಗಂಡನಾಗಿ ಬಾರದಿದ್ದುದೇ ಒಳ್ಳೆಯದಾಯಿತು. ಪ್ರಧಾನಿ ಮೋದಿ ತೀರ್ಮಾನದಿಂದ ನನಗೆ ಪರೋಕ್ಷವಾಗಿ ಒಳಿತಾಗಿದೆ, ಇದಕ್ಕಾಗಿ ಮೋದಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

Loading...

Leave a Reply

Your email address will not be published.