ಬೀಫ್ ಬಡಿಸಲಿಲ್ಲವೆಂದು ರದ್ದಾದ ಮದುವೆ – News Mirchi

ಬೀಫ್ ಬಡಿಸಲಿಲ್ಲವೆಂದು ರದ್ದಾದ ಮದುವೆ

ಲಕ್ನೋ: ಒಂದು ಕಡೆ ಗೋಹತ್ಯೆ ನಿಯಂತ್ರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬೀಫ್ ಬಡಿಸಲಿಲ್ಲವೆಂದು ಆಕ್ರೋಶದಿಂದ ವರನ ಕುಟುಂಬಸ್ಥರು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಧರಿಯಾಗಢ್ ನ ಭೋಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿವರಗಳಿಗೆ ಹೋಗುವುದಾದರೆ….

ರಾಂಪುರ್ ದಲ್ಲಿ ಶನಿವಾರ ರಿಜ್ವಾನ್ ಮತ್ತು ನಗ್ಮಾ ಎಂಬುವವರ ಮದುವೆ ನಡೆಯುವುದರಲ್ಲಿತ್ತು. ಮದುವೆ ಮಂಟಪದಲ್ಲಿ ವಧು ವರನ ಕಡೆಯವರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಇಲ್ಲಿಯವರೆಗೂ ಎಲ್ಲಾ ಸರಿಯಾಗೇ ಇತ್ತು… ಆದರೆ ಊಟದ ಕಾರಣದಿಂದಾಗಿ ಮದುವೆಯಲ್ಲಿ ರಾದ್ಧಾಂತವಾಯಿತು. ವರನ ಕಡೆಯವರು ತಮಗೆ ಗೋಮಾಂಸದ ಭಕ್ಷ್ಯಗಳನ್ನು ಬಡಿಸಲೇಬೇಕು ಎಂದು ಒತ್ತಾಯ ಮಾಡಿದರು. [ ಅಚ್ಚರಿಯ ಗಿಫ್ಟ್ ಕೊಡ್ತೀನಿ ಕಣ್ಮುಚ್ಚು ಅಂದ ಪತಿ, ಉಸರಿಗಟ್ಟಿಸಿ ಕೊಂದೇ ಬಿಟ್ಟ]

ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ನಂತರ ಶೇ.90 ಅಕ್ರಮ ಕಸಾಯಿಖಾನೆಗಳು ಬಂದ್ ಆಗಿವೆ. ಹೀಗಾಗಿ ಉತ್ತರಪ್ರದೇಶದಲ್ಲಿ ಗೋಮಾಂಸದ ಕೊರತೆಯಿದೆ. ಅದೂ ಅಲ್ಲದೆ ಊಟಕ್ಕೆ ಬೀಫ್ ನ ಖರ್ಚು ಭರಿಸಲು ಸಾಧ್ಯವಿಲ್ಲ ಎಂದು ಎಷ್ಟು ತಿಳಿಹೇಳಲು ಪ್ರಯತ್ನಿಸಿದರೂ ವರನ ಕುಟುಂಬದವರಿಗೆ ಸಮಾಧಾನವಿಲ್ಲ. ನಮ್ಮನ್ನೇ ಅವಮಾನಿಸುತ್ತೀರಾ ಊಟದಲ್ಲಿ ಬೀಫ್ ಇರಬೇಕು ಮತ್ತು ಕಾರು ವರದಕ್ಷಿಣೆಯಾಗಿ ನೀಡಬೇಕು ಇಲ್ಲವೆಂದರೆ ಮದುವೆ ರದ್ದುಗೊಳಿಸುತ್ತೇವೆ ಎಂದರು. ಆದರೆ ಈ ಬೇಡಿಕೆಗಳಿಗೆ ವಧುವಿನ ತಂದೆ ನಿರಾಕರಿಸಿದ್ದರಿಂದ ಮದುವೆ ರದ್ದುಗೊಳಿಸುತ್ತಿರುವುದಾಗಿ ಹೇಳಿ ವರನ ಸಂಬಂಧಿಕರು ಅಲ್ಲಿಂದ ಕಾಲ್ಕಿತ್ತರು. [ಯೋಗಾ ಮೇಲಿನ ನಂಬಿಕೆಯಿಂದ ಈತ ತಿಂದಿದ್ದೇನು ತಿಳಿದರೇ ಶಾಕ್…]

ಈ ಘಟನೆ ಕುರಿತು ವರ ರಿಜ್ವಾನ್ ಮತ್ತಾತನ ಕುಟುಂಬದವರ ಮೇಲೆ ವಧು ನಗ್ಮಾ ಕಡೆಯವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಾರು ಬೇಕೆಂದರೆ ಕೆಲ ದಿನಗಳ ನಂತರ ಕಷ್ಟಪಟ್ಟು ಕೊಡಬಹುದು, ಆದರೆ ನಿಷೇಧವಾಗಿರುವ ಗೋಮಾಂಸವನ್ನು ಒತ್ತಾಯಿಸಿ ತೊಂದರೆ ನೀಡಿದರು ಎಂದು ದೂರಿನಲ್ಲಿ ಹೇಳಿದ್ದಾರೆ.

Loading...