ಮಾತೃತ್ವ ಯೋಜನೆಗೆ ಯಾರು ಅರ್ಹರು, ಯಾವಾಗ ಎಷ್ಟು ಹಣ?

ಗರ್ಭಿಣಿ ಮಹಿಳೆಯರ ಪೌಷ್ಟಿಕ ಆಹಾರ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಸೂಕ್ತ ಪೌಷ್ಟಿಕ ಆಹಾರ ಸೇವಿಸುವಂತಾಗಲು ಅವರಿಗೆ ಸರ್ಕಾರದ ವತಿಯಿಂದ ರೂ. 6,000 ನೀಡಲಿದೆ. ಈ ಕುರಿತು ಡಿಸೆಂಬರ್ 31 ರಂದು ಪ್ರಧಾನಿ ಮೋದಿ ತಮ್ಮ‌ ಭಾಷಣದಲ್ಲಿ ಘೋಷಿಸಿದ್ದರು. ಇದಕ್ಕಾಗಿ ‘ಮಾತೃತ್ವ ಪ್ರಯೋಜನ ಯೋಜನೆ(ಎಂಬಿಪಿ)’ ಹೆಸರಿನಲ್ಲಿ ವಿಶೇಷ ಯೋಜನೆಯನ್ನು ಕೇಂದ್ರ ಮಹಿಳಾ ಮತ್ತು ಕಲ್ಯಾಣ ಇಲಾಖೆ ಹೊರತಂದಿದೆ.

ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ನೀಡಲಿರುವ 6 ಸಾವಿರ ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಗರ್ಭ ಧರಿಸಿದ್ದನ್ನು ನೋಂದಣಿ ಮಾಡಿಕೊಂಡಾಗ ರೂ.3,000, ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ರೂ.1,500 ಮತ್ತು ಮಗು ಹುಟ್ಟಿದ ಮೂರು ತಿಂಗಳಿಗೆ ರೂ.1,500 ನೀಡುತ್ತಾರೆ. ಮೊದಲ ಎರಡು ಹೆರಿಗೆಗಳಿಗಷ್ಟೇ ಈ ಯೋಜನೆಯ ಲಾಭ ದೊರೆಯಲಿದೆ.

ಕೇಂದ್ರ, ರಾಜ್ಯ ಸರ್ಕಾರಗಳು, ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಖಾಯಂ ಉದ್ಯೋಗಿಗಳಿಗೆ ಹೊರತುಪಡಿಸಿ ಎಲ್ಲಾ ಜಾತಿಯ, ಧರ್ಮದ ಗರ್ಭಿಣಿ ಮತ್ತು ಬಾಣಂತಿಯರಿಗೆ ಈ ಯೋಜನೆ ಅನ್ವಯವಾಗಲಿದೆ. ನೇರವಾಗಿ ಮಹಿಳೆಯರ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಿತ್ತದೆ. ಇದಕ್ಕಾಗುವ ವೆಚ್ಚಗಳನ್ನು ಕೇಂದ್ರ – ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ.60, ಶೇ.40 ರಷ್ಟು ಭರಿಸುತ್ತವೆ.

Loading...

Leave a Reply

Your email address will not be published.

error: Content is protected !!