Big Breaking News

ಮೋದಿಗೂ ಅದೇ ಆಗಬೇಕೆ? ಮಟ್ಟು ಮಾತು, ಬಿಜೆಪಿ ಅಕ್ರೋಶ

ಇಂದಿರಾಗಾಂಧಿಗೆ ಏನಾಯ್ತು ಗೊತ್ತಲ್ಲಾ, ಅದೇ ನಿಮ್ಮ ಮೋದಿಯವರಿಗೂ ಆಗಬೇಕೆಂದು ನಿಮ್ಮ ಆಸೆಯೇ?’ ಬೇರೆ ಯಾರಾದರೂ ಈ ಮಾತನ್ನು ಇತರ ರಾಜಕಾರಣಿಗಳ ಕುರಿತು ಅಡಿದ್ದರೆ ಇಷ್ಟೊತ್ತಿಗೆ ಅವರನ್ನು ಹುಡುಕಲು ವಿಶೇಷ ತಂಡವನ್ನೇ ರಚಿಸುತ್ತಿತ್ತು ಸರ್ಕಾರ. ಆದರೆ ಇದನ್ನು ಹೇಳಿದವರು ಮತ್ಯಾರೂ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ .

Download Free

fb_img_1478497039489ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಹಿಂದಿ ಸುದ್ದಿ ವಾಹಿನಿಯೊಂದಕ್ಕೆ ಒಂದು ದಿನದ ನಿಷೇಧ ವಿಧಿಸಿದ ಕೇಂದ್ರ ಸರ್ಕಾರದ ಕ್ರಮ ಕುರಿತ ಚರ್ಚೆಯಲ್ಲಿ ಮುಖ್ಯಮಂತ್ರಿಗಳ ಸಾಮಾಜಿಕ ತಾಣದಲ್ಲಿ ಕಮೆಂಟ್ ಬರೆದಿದ್ದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಟ್ಟು ಮಾತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿಯ ಕಾನೂನು ಘಟಕ ದೂರು ನೀಡಲು ತೀರ್ಮಾನಿಸಿದೆ.

fb_img_1478497033059ತನ್ನನ್ನು ಪ್ರಶ್ನಿಸುವವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು, ಬಿಜೆಪಿ ಆರ್‌ಎಸ್‌ಎಸ್ ವಿರುದ್ಧ ಕೆಂಡ ಕಾರುವುದು ಇವರಿಗೆ ಇದೇ ಮೊದಲ್ಲ. ಆದರೆ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ಕೀಳು ಮಟ್ಟದಲ್ಲಿ ಸಾಮಾಜಿಕ ತಾಣಗಳಲ್ಲಿ ಬರೆದು, ಪ್ರಶ್ನಿಸಿದವರಿಗೆ ನಿಂಧಿಸುವುದು ಎಷ್ಟು ಸರಿ, ಮುಖ್ಯಮಂತ್ರಿಗಳಿಗೆ ಇಂತಹ ಸಲಹೆಗಾರರ ಅವಶ್ಯಕತೆ ಏನಿದೆ ಎಂಬುದು ಜನರ ಪ್ರಶ್ನೆ.

Comments (wait until it loads)
loading...
class="clear">
error: Content is protected !!

News Mirchi is Stephen Fry proof thanks to caching by WP Super Cache