ಮಾಯಾ ರಾಜೀನಾಮೆ ಹಿಂದಿನ ತಂತ್ರ – News Mirchi

ಮಾಯಾ ರಾಜೀನಾಮೆ ಹಿಂದಿನ ತಂತ್ರ

ಬಿ.ಎಸ್.ಪಿ ನಾಯಕಿ ಮಾಯಾವತಿ ಅನಿರೀಕ್ಷಿತವಗಿ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿಂದೆ ಭಾರೀ ತಂತ್ರವೇ ಅಡಗಿದಂತೆ ಕಾಣಿಸುತ್ತಿದೆ. ಇತ್ತೀಚೆಗಿನ ಚುನಾವಣೆಗಳಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆಕೆ, ಮತ್ತೆ ರಾಜಕೀಯದಲ್ಇಲ ತಮ್ಮ ಬಲ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಮಾಯಾವತಿ ರಾಜ್ಯಸಭೆಯಲ್ಲಿ ತಮ್ಮ ಉಗ್ರರೂಪ ಪ್ರದರ್ಶಿಸಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಲಹಾಬಾದ್ ಸಮೀಪದ ಫೂಲ್ ಪುರ ಲೋಕಸಭೆ ಕ್ಷೇತ್ರದಿಂದ ಆಕೆ ಸ್ಪರ್ಧಿಸಲು ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದರೆ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಸಿಎಂ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ತಮ್ಮ ಲೋಕಸಭೆ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿದೆ. ಆದರೆ ರಾಷ್ಟ್ರಪತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅವರು ತಡ ಮಾಡುತ್ತಿದ್ದಾರೆ. ಆರು ತಿಂಗಳಲ್ಲಿ ಈ ಇಬ್ಬರೂ ಸಂಸತ್ ಸ್ಥಾನಗಳಿಗೆ ರಾಜೀನಾಮೆ ನೀಡಿ ಶಾಸಕರಾಗಿ ಗೆಲ್ಲುವುದು ಅಥವಾ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿದೆ.

ಮಂಗಳವಾರ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದ ನಂತರ ಚುನಾವಣೆಗೆ ಸಿದ್ಧವೆಂದು ಮಾಯಾವತಿ ಪರೋಕ್ಷವಾಗಿ ಹೇಳಿದ್ದಾರೆ. ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಶಾಸಕಿಯಾಗಿ ಚುನಾವನೆಯಲ್ಲಿಯೂ ಗೆದ್ದಿದ್ದೇನೆ. ಅಗತ್ಯ ಬಿದ್ದಾಗ ಮಾತ್ರ ರಾಜ್ಯಸಭೆಗೆ ಬಂದಿದ್ದೇನೆ ಎಂದು ಆಕೆ ಹೇಳಿದ್ದಾರೆ. ವಾಸ್ತವವೆಂದರೆ ಇತ್ತೀಚೆಗೆ ನೇರ ಚುನಾವಣೆಗಳಲ್ಲಿ ಮಾಯಾವತಿ ಸ್ಪರ್ಧಿಸಿಯೇ ಇಲ್ಲ. 2007 ರಲ್ಲಿ ಬಿಎಸ್ಪಿಗೆ ಬಹುಮತ ಬಂದರೂ ಆಕೆ ವಿಧಾನಸಭೆ ಸದಸ್ಯರಾಗಿಯೇ ಮುಖ್ಯಮಂತ್ರಿಯಾಗಿ ಮುಂದುವರೆದರು. ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಂತರ 2012 ರಲ್ಲಿ ರಾಜ್ಯಸಭೆಗೆ ಬಂದರು.

ಆದರೆ ಈಗ ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದರೆ ಅದು ಮಹತ್ವದ ರಾಜಕೀಯ ನಿರ್ಧಾರವಾಗುವುದರಲ್ಲಿ ಸಂದೇಹವಿಲ್ಲ. ಚುನಾವಣೆಯಲ್ಲಿ ಆಕೆ ಸ್ಪರ್ಧಿಸಿದ್ದೇ ಆದಲ್ಲಿ ಬಿಜೆಪಿ ವಿರೋಧಿ ಪಕ್ಷಗಳೆಲ್ಲಾ ಒಂದಾಗಿ ಆಕೆಗೆ ಬೆಂಬಲಿಸುವುದರಲ್ಲಿ ಅನುಮಾನವೇ ಇಲ್ಲ. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮುಂತಾದ ಪಕ್ಷಗಳು ಆಕೆಗೆ ಬೆಂಬಲ ನೀಡಬಹುದು. ಇದೇ ನಡೆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟಕ್ಕೆ ಮುನ್ನುಡಿಯಾಗಲಿದೆ. ದೇಶಾದ್ಯಂತ ಬಿಜೆಪಿಯೇತರ ಪ್ರತಿಪಕ್ಷಗಳೆಲ್ಲಾ ಒಂದಾಗಬಹುದು. ಇನ್ನು ಫೂಲ್ ಗರ್ ಕ್ಷೇತ್ರಕ್ಕೂ ರಾಜಕೀಯವಾಗಿ ಮಹತ್ವ ಪಡೆದಿದೆ. ಇಲ್ಲಿಂದಲೇ ದೇಶದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ ಸೇರಿದಂತೆ ಅನೇಕ ಪ್ರಮುಖ ನಾಯಕರು ಇಲ್ಲಿಂದಲೇ ಲೋಕಸಭೆ ಪ್ರವೇಶಿಸಿದ್ದರು. ಇಲ್ಲಿ ದಲಿತರು, ಹಿಂದುಳಿದವರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿಯೇ ಇಲ್ಲಿಂದ ಸ್ಪರ್ಧಿಸಲು ಮಾಯಾವತಿ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Loading...