ಗಿನ್ನಿಸ್ ಸೇರಿದ ವಿಶ್ವದ ಅತಿ ಉದ್ದದ ಕಾಲಿನ ಮಹಿಳೆ – News Mirchi

ಗಿನ್ನಿಸ್ ಸೇರಿದ ವಿಶ್ವದ ಅತಿ ಉದ್ದದ ಕಾಲಿನ ಮಹಿಳೆ

ರಷ್ಯಾ ಮಾಡೆಲ್ ಒಬ್ಬರು ಅತಿ ಉದ್ದದ ಕಾಲುಗಳಿಗಾಗಿ ವಿಶ್ವದ ಗಮನ ಸೆಳೆದಿದ್ದಾರೆ. ಹೌದು ಎಕಟೆರೀನಾ ಲಿಸಿನಾ ಎಂಬಾಕೆ ತಮ್ಮ ಉದ್ದದ ಕಾಲು ಹೊಂದಿರುವ ಮಹಿಳೆಯಾಗಿ 2018ರ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಗಳಿಸಿದ್ದಾರೆ.

ಈಕೆ 6.9 ಅಡಿ ಎತ್ತರವಿದ್ದು, ಎಡಗಾಲು 132.8 ಸೆಂ.ಮೀ(52.2 ಇಂಚು) ಇದ್ದರೆ, ಬಲಗಾಲು 132.2 ಸೆಂ.ಮೀ(52 ಇಂಚು) ಇದೆ. ಕಳೆದ ಜೂನ್ 13 ರಂದು ಆಕೆಯ ಕಾಲಿನ ಅಳತೆ ತೆಗೆದುಕೊಂಡ ಗಿನ್ನಿಸ್ ಬುಕ್ ಪ್ರತಿನಿಧಿಗಳು ಅತ್ಯಂತ ಉದ್ದದ ಕಾಲು ಹೊಂದಿರುವ ಮಹಿಳೆ ಎಂದು ಆಕೆಗೆ ಪ್ರಮಾಣ ಪತ್ರ ನೀಡಿದ್ದಾರೆ.

ಸಹಜವಾಗಿಯೇ ಎಕಟೆರೀನಾ ಕುಟುಂಬದಲ್ಲಿನ ವ್ಯಕ್ತಿಗಳು ಆರು ಅಡಿಗಳಿಗಿಂತ ಹೆಚ್ಚು ಎತ್ತರವಿದ್ದರೆ, ಅವರಲ್ಲಿ ಎಕಟೆರೀನಾ ಎಲ್ಲರಿಗಿಂತ ಎತ್ತರದವಳು. ಆಕೆಯ ಸಹೋದರ 6.6 ಅಡಿ ಎತ್ತರವಿದ್ದರೆ, ತಂದೆ 6.5 ಅಡಿ, ತಾಯಿ 6 ಅಡಿ ಎತ್ತರವಿದ್ದಾರೆ.

ಮಾಡೆಲ್ ಆಗುವ ಬಯಕೆ ಹೊಂದಿದ್ದ ಎಕಟೆರೀನಾಗೆ ಸಣ್ಣ ವಯಸ್ಸಿನಲ್ಲಿ ಆಕೆಯ ಕಾಲುಗಳ ಉದ್ದದ ಬಗ್ಗೆ ಇತರರು ಹೆದರಿಸುತ್ತಿದ್ದರಂತೆ. 2008 ರಲ್ಲಿ ನಡೆದ ಬೀಜಿಂಗ್ ಒಲಂಪಿಕ್ಸ್ ನಲ್ಲಿ ರಷ್ಯಾದ ಒಲಂಪಿಕ್ಸ್ ಬ್ಯಾಸ್ಕೆಟ್ ಬಾಲ್ ತಂಡದಲ್ಲಿ ಆಡಿದ್ದ ಈಕೆ ಕಂಚಿನ ಪದಕ ಗೆದ್ದಿದ್ದರು.

Contact for any Electrical Works across Bengaluru

Loading...
error: Content is protected !!