ಹಾವಿನ ಪೊರೆಯಂತೆ ಕಿತ್ತು ಬರುವ ಚರ್ಮ, ಈಕೆಗೆ ಪ್ರತಿ ದಿನ ನರಕಯಾತನೆ

ಎಲ್ಲರೂ ಒಳ್ಳೆಯ ಆರೋಗ್ಯವನ್ನು ಬಯಸುತ್ತಾರೆ, ಅದರೆ ಎಲ್ಲರಿಗೂ ಆ ಭಾಗ್ಯವುರುವುದಿಲ್ಲವಲ್ಲ. ಇಲ್ಲೊಬ್ಬ ಬಡ ಹೆಣ್ಣು ಮಗಳಾದ ಶಾಲಿನಿ ವಿಚಿತ್ರ ಖಾಯಿಲೆಯಿಂದ ನರಕಯಾತನೆ ಅನುಭವಿಸುತ್ತಿದ್ದಾಳೆ. ಜೀವನದಲ್ಲಿ ಹಲವು ನೋವುಂಡ ಶಾಲಿನಿಗೆ ಆರು ವಾರಗಳಿಗೊಮ್ಮೆ ದೇಹದ ಚರ್ಮ ಹಾವಿನ ಪೊರೆಯಂತೆ ಕಿತ್ತು ಬರುತ್ತದೆ.

ಈಕೆ ಎರಿಥ್ರೊಡೆರ್ಮಾ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಅದರಿಂದಾಗುವ ನೋವಿನಿಂದ ಉಪಶಮನ ಪಡೆಯಲು ಪ್ರತಿ ಗಂಟೆಗೊಮ್ಮೆ ಚರ್ಮವನ್ನು ಒದ್ದೆ ಮಾಡಿ ಪ್ರತಿ ಮೂರು ಗಂಟೆಗಳಿಗೊಮ್ಮೆ ವಿಶೇಷ ಕೋಲ್ಡ್ ಕ್ರೀಮ್ ಹಚ್ಚುತ್ತಿದ್ದಾಳೆ. ಆದರೆ ಇದನ್ನು ಪ್ರತಿದಿನ ಪೂರೈಸಲು ಹಣ ಹೊಂದಿಸಲು ಆಕೆಯ ಕುಟುಂಬ ಹೆಣಗಾಡುತ್ತಿದೆ.

ಚಿಕ್ಕವಳಿದ್ದಾಗಲೇ ಶಾಲಿನಿಗೆ ಈ ಖಾಯಿಲೆ ಕಾಣಿಸಿಕೊಂಡಿತ್ತು. ಪ್ರತಿ 45 ದಿನಗಳಿಗೊಮ್ಮೆ ಆಕೆಯ ದೇಹದಿಂದ ಚರ್ಮ ಸಂಪೂರ್ಣವಾಗಿ ಬೇರ್ಪಡುತ್ತದೆ. ಹಲವು ವೈದ್ಯರ ಬಳಿ ಹೋದರೂ, ಪ್ರಯೋಜನವಾಗಿಲ್ಲ. ಮಗಳ ಈ ಪರಿಸ್ಥಿತಿಯನ್ನು ಕಂಡು ತಾಯಿ ಅಸಹಾಯಕರಾಗಿದ್ದಾರೆ.

ಈ ಖಾಯಿಲೆ ಒಮ್ಮಲೇ ಶಾಲಿನಿಯನ್ನು ಕೊಲ್ಲದೇ ನಿಧಾನವಾಗಿ ಕೊಲ್ಲುತ್ತಾ ಜೀವನ ನರಕ ಮಾಡಿದೆ ಎಂದು ಹೇಳುವ ತಾಯಿ, ಈ ರೋಗದಿಂದ ಮುಕ್ತಿ ಪಡೆಯಲು ಎಲ್ಲಿಗೆ, ಯಾರ ಬಳಿ ಹೋಗಬೇಕೆಂಬುದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ವಿಚಿತ್ರ ಖಾಯಿಲೆಯಿಂದಾಗಿ ಶಾಲಿನಿ ಶಾಲೆಯಿಂದ ವಂಚಿತಳಾದಳು. ಮೊದಲು ಶಾಲೆಗೆ ಈಕೆ ಶಾಲೆಗೆ ಹೋಗುತ್ತಿದ್ದಳು, ಆದರೆ ಇತರೆ ಮಕ್ಕಳು ಈಕೆಯನ್ನು ನೋಡಿ ಹೆದರುತ್ತಿದ್ದರು. ಈ ಕಾರಣಕ್ಕೆ ಈಕೆ ಶಾಲೆಯಿಂದ ದೂರವುಳಿಯಬೇಕಾಯಿತು.

Loading...
error: Content is protected !!