ಶಶಿಕಲಾ ವಿರುದ್ಧ ಅಪಪ್ರಚಾರ ಮಾಡಿದರೆ ಜೋಕೆ

ಚೆನ್ನೈ: ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅಣ್ಣಾಡಿಎಂಕೆ ಐಟಿ ವಿಭಾಗ ಹೇಳಿದೆ. ಶಶಿಕಲಾ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ದಿನದಿಂದಲೂ ಶಶಿಕಲಾರ ಮಾರ್ಫಿಂಗ್ ಫೋಟೋಗಳು, ವ್ಯಂಗ್ಯ ಎಸ್.ಎಂ.ಎಸ್ ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾದ ನಂತರವಂತೂ ಇಂತಹ ಅಪಪ್ರಚಾರ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುವ ಮುನ್ನ ಜಯಯಲಿತಾ ಸಮಾಧಿ ಬಳಿ ಮಾಡಿದ ಶಪಥಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ವ್ಯಂಗ್ಯೋಕ್ತಿಗಳು, ಮಾರ್ಫಿಂಗ್ ಫೋಟೋಗಳು ಹರಿದಾಡಿವೆ. ಹೀಗಾಗಿ ಇಂತಹ ಕೃತ್ಯಗಳಿಗೆ ಅಣ್ಣಾಡಿಎಂಕೆ ಐಟಿ ವಿಭಾಗ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿರುವ ಶಶಿಕಲಾ ವಿರುದ್ಧದ ಅಪಪ್ರಚಾರದ ಕುರಿತು ಗಮನ ಹರಿಸಿದ್ದೇವೆ, ಪನ್ನೀರ್ ಸೆಲ್ವಂ ಬೆಂಬಲಿಗರೇ ಇಂತಹ ಕೃತ್ಯಗಳಿಗೆ ಮುಂದಾಗಿದ್ದಾರೆ ಎಂದು ಐಟಿ ವಿಭಾಗ ಆರೋಪಿಸುತ್ತಿದೆ. ಇಲ್ಲಿಯವರೆಗೂ 180 ಜನರನ್ನು ಗುರುತಿಸಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಎಐಎಡಿಎಂಕೆ ಐಟಿ ವಿಭಾಗ ಎಚ್ಚರಿಸಿದೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache